Home ಮುಖಪುಟ ಸುದ್ದಿ ಟ್ರಂಪ್‌ರಿಂದ ಮತ್ತೆ ಮೋದಿ ಗುಣಗಾನ

ಟ್ರಂಪ್‌ರಿಂದ ಮತ್ತೆ ಮೋದಿ ಗುಣಗಾನ

ಏವಿಯನ್ (ಫ್ರಾನ್ಸ್), ಜೂ. ೨೦: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ಮಟ್ಟದಲ್ಲಿ ತಮಗೆ ಅತಿ ಹೆಚ್ಚು ಇಷ್ಟವಾಗುವ ಹಾಗೂ ಪ್ರಭಾವಶಾಲಿ ನಾಯಕರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಜಿ-೭ ಶೃಂಗಸಭೆಯ ಮುಕ್ತಾಯದ ನಂತರ ನೀಡಿದ ವಿಶೇಷ ಸಂದರ್ಶನದಲ್ಲಿ, ಅಧಿಕಾರ, ಪ್ರಭಾವ ಮತ್ತು ನಿರ್ಧಾರಗಳನ್ನು ಜಾರಿಗೆ ತರುವ ಸಾಮರ್ಥ್ಯದ ಆಧಾರದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ವಿಶ್ವದ ಅತ್ಯಂತ ಶ್ರೇಷ್ಠ ನಾಯಕರು ಎಂದು ಬಣ್ಣಿಸಿದ್ದಾರೆ.

ಟ್ರಂಪ್ ಅವರು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ರಾಜತಾಂತ್ರಿಕ ಚತುರತೆಯನ್ನು ಮುಕ್ತವಾಗಿ ಶ್ಲಾಘಿಸಿದರು ‘ವೆರಿ ಟಫ್ ಕುಕ್ಕೀ’ ಮತ್ತು ‘ಟಫ್ ಗೈ’ ಪ್ರಧಾನಿ ಮೋದಿ ನೋಡಲು ಅತ್ಯಂತ ಶಾಂತ ಹಾಗೂ ಸೌಮ್ಯ ಸ್ವಭಾವದವರಂತೆ (ದೇವದೂತರಂತೆ) ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಅವರು ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳುವ ನಾಯಕ (‘ಟಫ್ ಕುಕ್ಕೀ’ ಮತ್ತು ’ಕಿಲರ್’) ಎಂದು ಬಣ್ಣಿಸಿದರು.

“ನಾನು ಹಲವು ವರ್ಷಗಳಿಂದ ಭಾರತದ ರಾಜಕಾರಣವನ್ನು ಗಮನಿಸಿದ್ದೇನೆ. ಅಲ್ಲಿ ಪ್ರತಿ ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಪ್ರಧಾನಿಗಳು ಬದಲಾಗುತ್ತಿದ್ದರು. ಆದರೆ ಮೋದಿ ಕಳೆದ ೧೨ ವರ್ಷಗಳಿಗೂ ಹೆಚ್ಚು ಕಾಲ ಅತ್ಯಂತ ಭದ್ರವಾಗಿ ಅಧಿಕಾರದಲ್ಲಿದ್ದಾರೆ. ಅವರಲ್ಲಿ ಒಂದು ಅದ್ಭುತವಾದ ಶಾಂತತೆಯಿದೆ, ಹಾಗಂದ ಮಾತ್ರಕ್ಕೆ ಅವರೊಬ್ಬ ಶಾಂತ ವ್ಯಕ್ತಿಯಲ್ಲ, ಅತ್ಯಂತ ಧೀರ ನಾಯಕ” ಎಂದರು.

ಭಾರತವು ೧೫೦ ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವದ ದೊಡ್ಡ ದೇಶ. ಇಷ್ಟಿದ್ದರೂ ಮೋದಿ ಅವರು ಅನಗತ್ಯ ಯುದ್ಧಗಳಿಂದ ಭಾರತವನ್ನು ದೂರವಿಟ್ಟಿದ್ದಾರೆ, ಇದು ಅವರ ಜಾಣ್ಮೆಯನ್ನು ತೋರಿಸುತ್ತದೆ ಎಂದು ಟ್ರಂಪ್ ಹೊಗಳಿದರು.

ವ್ಯಾಪಾರ ಸಂಬಂಧ: ಹಿಂದೆ ಭಾರತವು ಅಮೆರಿಕದೊಂದಿಗೆ ಏಕಪಕ್ಷೀಯವಾಗಿ ವ್ಯಾಪಾರ ಮಾಡುತ್ತಿತ್ತು (ಖiಠಿ us oಜಿಜಿ). ಆದರೆ ಈಗ ಉಭಯ ದೇಶಗಳ ನಡುವೆ ಸಮಾನ ಮತ್ತು ನ್ಯಾಯಯುತ ವ್ಯಾಪಾರ ನಡೆಯುತ್ತಿದೆ. ಈ ಹೊಸ ಬದಲಾವಣೆಯಿಂದ ಭಾರತಕ್ಕೆ ಅಷ್ಟಾಗಿ ಸಂತೋಷವಿಲ್ಲದಿದ್ದರೂ, ಮೋದಿ ಒಬ್ಬ ಶ್ರೇಷ್ಠ ನಾಯಕ ಎಂದು ಟ್ರಂಪ್ ಹೇಳಿದರು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕಾರ್ಯವೈಖರಿಯನ್ನು ಶ್ಲಾಘಿಸಿದ ಟ್ರಂಪ್, ಅವರು ಕೇವಲ ಕೆಲಸದ ಕಡೆಗೆ ಮಾತ್ರ ಗಮನ ಹರಿಸುವ ವ್ಯಕ್ತಿ ಎಂದರು.ಒಂದು ವೇಳೆ ನೀವೇನಾದರೂ ಕ್ಸಿ ಜಿನ್‌ಪಿಂಗ್ ಅಥವಾ ನರೇಂದ್ರ ಮೋದಿ ಅವರ ಕುರಿತು ಚಲನಚಿತ್ರ ಮಾಡಲು ಹೊರಟರೆ, ಅವರ ಪಾತ್ರಕ್ಕೆ ಸರಿಹೊಂದುವ ಒಬ್ಬನೇ ಒಬ್ಬ ವ್ಯಕ್ತಿಯೂ ನಿಮಗೆ ಹಾಲಿವುಡ್‌ನಲ್ಲಿ ಸಿಗಲು ಸಾಧ್ಯವಿಲ್ಲ. ಕ್ಸಿ ಜಿನ್‌ಪಿಂಗ್ ೬ ಅಡಿ ೨ ಇಂಚು ಎತ್ತರವಿದ್ದು, ಅದ್ಭುತ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ಹೊಂದಿದ್ದಾರೆ. ಮೋದಿ ಅವರ ಶೈಲಿಯೇ ಬೇರೆ, ಅವರಿಗೆ ಜಾಗತಿಕವಾಗಿ ಅಪಾರ ಗೌರವವಿದೆ” ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದರು.

ಜಿ-೭ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಉಭಯ ನಾಯಕರ ದ್ವಿಪಕ್ಷೀಯ ಸಭೆಯು ಅತ್ಯಂತ ಮಹತ್ವದ್ದಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಸುಂಕದ ವಿವಾದ, ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದು ಮತ್ತು ಇರಾನ್ ಸಂಘರ್ಷದ ವೇಳೆ ಒಮಾನ್ ಕೊಲ್ಲಿಯಲ್ಲಿ ಅಮೆರಿಕ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದರಿಂದ ಉಭಯ ದೇಶಗಳ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿತ್ತು.

ಈ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಾತನಾಡಿದ ಟ್ರಂಪ್, “ಭಾರತ ಮತ್ತು ನಮ್ಮ ನಡುವೆ ಯಾವುದೇ ಔಪಚಾರಿಕ ರಕ್ಷಣಾ ಒಪ್ಪಂದವಿಲ್ಲದಿದ್ದರೂ, ಭಾರತದ ಮೇಲೆ ಯಾವುದೇ ದೇಶ ದಾಳಿ ಮಾಡಿದರೆ ಅಮೆರಿಕ ಬೆಂಬಲಕ್ಕೆ ನಿಲ್ಲಲಿದೆ. ಭಾರತದಲ್ಲಿ ಮೋದಿ ನಾಯಕರಾಗಿರುವ ತನಕ ವೈಟ್ ಹೌಸ್‌ನಲ್ಲಿ ಅವರಿಗೆ ಒಬ್ಬ ಅತ್ಯುತ್ತಮ ಸ್ನೇಹಿತನಿದ್ದಾನೆ” ಎಂದು ಬಲವಾದ ಭರವಸೆ ನೀಡಿದರು.

ಇರಾನ್ ಜೊತೆಗಿನ ಇತ್ತೀಚಿನ ಕದನ ವಿರಾಮ ಒಪ್ಪಂದದ ನಂತರ, ತಮ್ಮ ಅಧಿಕಾರಕ್ಕೆ ಯಾವುದೇ ಮಿತಿಗಳಿಲ್ಲ (ಓo ಐimiಣs) ಎಂದು ಟ್ರಂಪ್ ಪ್ರತಿಪಾದಿಸಿದರು.


ಇಸ್ರೇಲ್ ದೇಶಕ್ಕೆ ನನ್ನ ಮೇಲೆ ಅಪಾರ ಗೌರವವಿದೆ, ನಾನು ಹೇಳಿದಂತೆ ಅವರು ಕೇಳುತ್ತಾರೆ. ನಾನಿಲ್ಲದಿದ್ದರೆ ಇಂದು ಇಸ್ರೇಲ್ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ ಎಂದು ಟ್ರಂಪ್ ಹೇಳಿಕೊಂಡರು. ಜಿ-೭ ಒಕ್ಕೂಟದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಲ್ಲದಿರುವಿಕೆಗೆ ಅವರು ವಿಷಾದ ವ್ಯಕ್ತಪಡಿಸಿದರು. ರಷ್ಯಾ ಒಕ್ಕೂಟದಲ್ಲಿದ್ದರೆ ಉಕ್ರೇನ್ ಯುದ್ಧವೇ ನಡೆಯುತ್ತಿರಲಿಲ್ಲ ಎಂದರು.


ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ತಮಗಾಗಿ ವರ್ಸೈಲ್ಸ್ ಅರಮನೆಯಲ್ಲಿ ಆಯೋಜಿಸಿದ್ದ ರಾಜಾತಿಥ್ಯದ ಔತಣಕೂಟವನ್ನು ನೆನೆದ ಟ್ರಂಪ್, ಇಂತಹ ಭವ್ಯ ರಾಜವೈಭವದ ವ್ಯವಸ್ಥೆಗಳೇ ನನ್ನ ದೌರ್ಬಲ್ಯ ಎಂದು ತಮಾಷೆ ಮಾಡಿದರು.

ಗಮನಾರ್ಹವಾಗಿ, ಭಾರತ ಮತ್ತು ಚೀನಾ ನಾಯಕರನ್ನು ಶ್ಲಾಘಿಸಿದ ನಂತರ ಟ್ರಂಪ್ ಅವರು ತಮಗೆ ಇಷ್ಟವಾದ ನಾಯಕರ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಂ ಮುನೀರ್ ಅವರ ಹೆಸರನ್ನೂ ಟ್ರಂಪ್ ಉಲ್ಲೇಖಿಸಿದ್ದಾರೆ