
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.20: ಸಂಡೂರು ತಾಲೂಕಿನ ಅಸ್ಮಿತೆ ಎಂದರೆ ಜೆಎಸ್ ಡಬ್ಲು ಸಂಡೂರು ಎಲ್ಲಿ ಎಂದರೆ ಬಹಳಷ್ಟು ಜನತೆಗೆ ಗೊತ್ತಿಲ್ಲ.ಜೆಎಸ್ ಡಬ್ಲು ಸಂಸ್ಥೆ ಇದೆ ಅದು ನನ್ನ ಕ್ಷೇತ್ರದಲ್ಲಿ ಬರುತ್ತೆ ಎಂದರೆ ಆಗ ಈ ಸಂಸ್ಥೆ ಮೂಲಕ ಸಂಡೂರು ಎಂದರೆ ಗೊತ್ತಾಗುತ್ತೆ. ಈ ಸಂಸ್ಥೆಯಿಂದ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಸಹಾಯ ಸಹ ಪಡೆದಿದೆ. ತನು ಮನ ಧನದಿಂದ ಸಂಸ್ಥೆಯು ತಾಲೂಕಿನ ಅಭಿವೃದ್ಧಿಗೆ ಉತ್ತಮವಾಗಿ ಕೈ ಜೋಡಿಸಿದೆಂದು ಹೇಳಿದ್ದು ಬೇರೆ ಯಾರೂ ಅಲ್ಲ ಸಂಡೂರು ಶಾಸಕಿ ಅನ್ನಪೂರ್ಣ ತುಕರಾಂ.
ಅವರು ನಿನ್ನೆ ಸಂಜೆ ತೋರಣಗಲ್ಲಿನ ಜಿಂದಾಲ್ ನ ವಿದ್ಯಾನಗರದ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದರು.
ಸಂಡೂರಿನ ಕುಮಾರಸ್ವಾಮಿ ದೇವಾಲಯ. ಹತ್ತಾರು ಕಿಲೋ ಮೀಟರ್ ವ್ಯಾಪಿಸಿರುವ ಉತ್ಕೃಷ್ಟ ಕಬ್ಬಿಣ, ಮ್ಯಾಂಗನೀಸ್ ಅದಿರು ಮತ್ತು ಹಚ್ಚ ಹಸಿರಿನ ಕಾಡು, ನಾರಿ ಹಳ್ಳದ ಸೌಂದರ್ಯ, ಸಂಡೂರು ಅರಸು ಮನೆ ತನ, ಲಮಬಾಣಿಯ ಕುಸರಿ ಕಲೆ ಇವಾವು ಇವರಿಗೆ ಸಂಡೂರಿನ ಆಸ್ಮಿತೆ ಎಂದು ಕಾಣಿಸಲಿಲ್ಲ. ಜಿಂದಾಲ್ ಕಾರ್ಖಾನೆ ಆಸ್ಮಿತಿಯಂತೆ
ಇನ್ನು ಈ ಸಂಸ್ಥೆಯ ಕೈಗಾರಿಕಾ ವಲಯದ ಸುತ್ತಮುತ್ತಲಿನ ಸಾಕಷ್ಟು ಜನ ನನಗೆ ಮನವಿ ಮಾಡಿದ್ದಾರೆ. ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ಗಾಳಿ ಬರುತ್ತೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು.
ಸುತ್ತಮುತ್ತ ಇರುವವರೆಲ್ಲ ಗಣಿ ಕಾರ್ಮಿಕರು, ಬಡವರು ಅವರ ಬಗ್ಗೆ ಕರುಣೆ, ಕಾಳಜಿ ಇರಲಿ ನಿಮಗೆ. ಕೆಳ ಸ್ತರದಲ್ಲಿ ಬದುಕುವ ಜನತೆಗೆ ಉಚಿತವಾದ ಒಂದು ಆಸ್ಪತ್ರೆ ನಿರ್ಮಿಸಲು ಸಹ ಮನವಿ ಮಾಡುವೆ.
ಬಹುತೇಕ ಸುತ್ತಮುತ್ತಲಿನ ಜನ ನಿಮ್ಮನ್ನು ಆಶ್ರಯಿಸಿ ಬದುಕುತ್ತಿದ್ದಾರೆ. ಅವರ ಮೇಲೆ ದಯಮಾಡಿ ತಮಗೆ ವಿಶೇಷ ಕಾಳಜಿ ಇರಲಿ ಎಂದು ಹೇಳಿದ್ದದು ಪರ್ಯಾಸವಾಗಿತ್ತು.
ಶಾಸಕರಾದವರು ಕಾರ್ಖಾನೆಯಿಂದ ರಸಾಯನಿಕಯುಕ್ತ ಗಾಳಿ ಬರುವುದಾದರೆ ಅದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಾದರೆ. ಅದನ್ನು ತಡೆಯಿರಿ ಎಂದು ಗದರಿ ಅದೇಶ ಮಾಡಬೇಕಿತ್ತೇ ಹೊರತು ದಯನೀಯ ಸ್ಥಿತಿಯಲ್ಲಿ ಮನವಿ ಮಾಡಿದ್ದು ಸೋಜಿಗದಿಂದ ಕೂಡಿತ್ತು.


























