
ನವಲಗುಂದ,ಮಾ.೩೦: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ಜಾರಿಯಾದ ನಂತರ ಸಮುದಾಯ ಭಾಗವಹಿಸುವಿಕೆಗೆ ಮತ್ತಷ್ಟು ಕಾನೂನಾತ್ಮಕ ಒತ್ತಾಸೆ ಬಂದಿದ್ದು ಹೆಚ್ಚಿನ ಕಾನೂನಿನ ಬೆಂಬಲ ಸಿಕ್ಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೀಪಕ್ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕೇಂದ್ರ ಶಾಲೆ ಏರ್ಪಡಿಸಿದ್ದ ನವಲಗುಂದ ಉರ್ದು ಹಾಗೂ ಆರೇಕುರಹಟ್ಟಿ ಕ್ಲಸ್ಟರ್ ನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಎಸ್ ಡಿ ಎಂ ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾಗನೂರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶೌಕತಲಿ ಲಂಬೂನವರ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ “ಶಾಲಾ ಅಭಿವೃದ್ಧಿ ಯೋಜನೆ ಎಂದರೆ ಶಾಲಾ ಹಂತದಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಶಾಲೆಯ ಸಮಗ್ರ ಅಭಿವೃದ್ಧಿ ಗಾಗಿ ಸಿದ್ದಪಡಿಸುವ ಯೋಜನೆಯಾಗಿರುತ್ತದೆ ಎಂದು ಹೇಳಿದರು.”
ಕ್ಷೇತ್ರಸಮನ್ವಯಾಧಿಕಾರಿ ರೇಣುಕಾ ಮುರನಾಳ, ಶಿಕ್ಷಣ ಸಂಯೋಜಕ ಶಿವಾನಂದ ಬೆಂಚಿಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಎಫ್ ನೀರಲಗಿ ಇತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಈರಣ್ಣ ಬೆಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.
ಎನ್ ವಾಯ್ ಕಳಸಾಪುರ, ಪ್ರಧಾನ ಗುರುಗಳಾದ ಎನ್ ಎಸ್ ತಾಳಿಕೋಟಿಮಠ, ವೇದಾವತಿ ದಂಡಾಗಿದಾಸರ ಎಸ್ ಡಿ ಎಂ ಸಿ ಅಧ್ಯಕ್ಷ ಬನ್ನೇಪ್ಪ ಕುರಹಟ್ಟಿ, ಎನ್ ಆರ್ ಪಾಟೀಲ, ಉಮೇಶ್ ನವಲಗುಂದ, ಕಾಸಿಮಸಾಬ್ ಮಾಚಲಿಬಂದರ, ಯಕ್ಕುಂಡಿ, ವಿರೇಶ್ ಗುಳೇದ ಸೇರಿದಂತೆ ನಾಲ್ಕು ಕ್ಲಸ್ಟರ್ ನ ಶಾಲೆಗಳ ಎಸ್ ಡಿ ಎಂ ಸಿ ಸದಸ್ಯರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿವಯೋಗಿ ಜಂಗಣ್ಣವರ, ಮಹೇಶ್ ಮಂತ್ರಿ, ಶ್ರೀನಿವಾಸ ಅಮಾತೆಣ್ಣವರ, ಎಚ್ ಕೆ ಗುರಾಣಿ ಕಾರ್ಯಕ್ರಮ ನಿರ್ವಹಿಸಿದರು.






















