Home ಜಿಲ್ಲೆ ಇಂದು ವಿಜಯೋತ್ಸವ

ಇಂದು ವಿಜಯೋತ್ಸವ

ಹುಬ್ಬಳ್ಳಿ, ಮೇ೩೦: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರುನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರಿಂದ ಅವರ ಹಿಂಬಾಲಕರು, ಅಭಿಮಾನಿಗಳಿಂದ ಇಂದು ಸಂಜೆ ೪ ಘಂಟೆಗೆ ಹುಬ್ಬಳ್ಳಿ ನಗರದ ಕೇಶ್ವಾಪೂರ ಸರ್ವೋದಯ ಸರ್ಕಲ್ ನಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ ಮೇಹರವಾಡೆ ಪ್ರಕಟಣೆಯಲ್ಲಿ ತಿಳಿಸಿದ್ದು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಅಭಿಮಾನಿಗಳು ಹಾಜರಿರಬೇಕೆಂದು ಕೋರಿದ್ದಾರೆ.