
ಲಕ್ಷೆ÷್ಮÃಶ್ವರ,ಮೇ.೩೧: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯ ಮತ್ತು ಶಾಲಾ ಬಸ್ಸುಗಳ ವಾಹನಗಳ ಚಾಲಕರ ಸಭೆಯನ್ನು ಕರೆಯಲಾಗಿತ್ತು.
ಕಳೆದ ವರ್ಷ ಶಾಲಾ ಬಸ್ ಅಪಘಾತದಲ್ಲಿ ದೊಡ್ಡೋರು ಸಮೀಪ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕುರಿತು ಪಿಎಸ್‌ಐ ನಾಗರಾಜ್ ಗಡದ ಅವರು ಸಭೆ ಕರೆದು ಮಾಹಿತಿ ನೀಡಿದರು.
ಶಾಲಾ ಬಸ್ಸುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ವಾಹನಗಳಿಗೆ ಸಂಬAಧಪಟ್ಟAತೆ ಎಲ್ಲಾ ದಾಖಲೆಗಳು ವಾಹನಗಳಲ್ಲಿ ಕ್ಲೀನರ್ ಗಳ ನೇಮಕ ಡ್ರೆöÊವಿಂಗ್ ಲೈಸೆನ್ಸ್ ಪರಿಸರ ಸರ್ಟಿಫಿಕೇಟ್ ಸೇರಿದಂತೆ ವಾಹನಗಳಲ್ಲಿ ಎಲ್ಲಾ ದಾಖಲೆಗಳನ್ನು ಇಟ್ಟಿರಬೇಕು ಮತ್ತು ಮಕ್ಕಳ ಸಂರಕ್ಷಣೆಗಾಗಿ ಪ್ರತಿ ವಾಹನದಲ್ಲೂ ಓರ್ವ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.
ಆಡಳಿತ ಮಂಡಳಿಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರು ಮತ್ತು ಸದಸ್ಯರು ಮಕ್ಕಳ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಎಸ್ ಕೋಷ್ಟಿ ಕೆಎಂ ಹಿರೇಮಠ ಆರ್ ಜೆ ಸುರಗಿ ಮಠ ಗುಡ್ಡಪ್ಪ ಕಳಸೂರ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

























