
ಕಲಬುರಗಿ: ಎಲ್ಲ ಕಾರ್ಮಿಕರಿಗೂ ಮಾಸಿಕ ಸರಾಸರಿ 36 ಸಾವಿರ ರೂ ಕನಿಷ್ಠ ವೇತನ ನಿಗದಿ ಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಿಐಟಿಯು ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಎಂ.ಬಿ ಸಜ್ಜನ್,ಶಾಂತಾ ಘಂಟಿ,ನಾಗಯ್ಯಸ್ವಾಮಿ,ಶ್ರೀಮಂತ ಬಿರಾದಾರ,ರಾಜವತಿ ಪಾಟೀಲ,ಮಂಜುಳಾ ಪೂಜಾರಿ,ನಾಗಪ್ಪ ರಾಜೂರಕರ ಸೇರಿದಂತೆ ಹಲವರು ಪಾಲ್ಗೊಂಡರು.
























