
ಸೈದಾಪುರ:ದೀಪಾವಳಿ ಹಬ್ಬ ಮನದ ಅಂಧಕಾರ ತೊಲಗಿ ಸುಜ್ಞಾನದ ಬೆಳಕು ಹರಿಸುವ ಹಬ್ಬ ಇದಾಗಿದೆ. ವಿವಿಧ ದೇಶಗಳಲ್ಲಿ ತಮ್ಮದೆ ರೀತಿಯಲ್ಲಿ ಸಂಭ್ರಮದೊAದಿಗೆ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ ಎಂದು ಪಟ್ಟಣದ ವೆಂಕಟೇಶ ಪೂರಿ ಅಭಿಪ್ರಾಯಪಟ್ಟರು.
ತಮ್ಮ ಕುಟಂಬಸ್ಥರು, ಬಂಧುಗಳು ಹಾಗೂ ಹಿತೈಸಿಗಳೊಂದಿಗೆ ದೀಪಾವಳಿ ಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು. ಹಿರಿಯರೆಲ್ಲರೂ ಮನೆಗಳ ಸ್ವಚ್ಛತೆ, ತಿಂಡಿ-ಊಟಗಳ ತಯಾರಿಯಲ್ಲಿ ತೊಡಗಿದರೆ ಮಕ್ಕಳು, ತರುಣರು ಪಾಟಕಿ ಸಿಡಿಸುವುದು, ಆಕಾಶಬುಟ್ಟಿ ತಯಾರಿಸಿ ದೀಪಗಳಿಂದ ಮನೆಗಳನ್ನು ಅಲಾಂಕಾರದಲ್ಲಿ ತೊಡಗುವರು. ದೀಪ ಜೀವನದ ಸಂಕೇತವಾಗಿದೆ. ಅತಿ ಹೆಚ್ಚಿನ ಸಂಖ್ಯೆಯನ್ನು ಹೊಂದಿದ ನಮ್ಮ ದೇಶದ ರೈತರಿಗೆ ಉತ್ತಮ ಬೆಳೆಯನ್ನು ಕೊಟ್ಟು ಬದಕು ನೆಮ್ಮದಿಯಾಗುವಂತೆ ಮಾಡಲಿ ಎಂದು ಪ್ರಾರ್ಥಿಸಿದರು. ಗ್ರಾಮಗಳಲ್ಲಿ ವಿವಿಧ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡಿದರು.
























