
ಬೀದರ್: ಏ.೨೮:ಇತ್ತೀಚೆಗೆ ತಮಿಳುನಾಡಿನಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಓರ್ವ ಭಯೋತ್ಪಾದಕ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಹೇಳಿದರು.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜನರನ್ನು ಭಯಪಡಿಸುವವರನ್ನು ಭಯೋತ್ಪಾದಕ ಎಂತಲೆ ಕರೆಯುವುದು. ಹಾಗಾಗಿ ಡಾ.ಖರ್ಗೆ ಅವರು ಸರಿಯಾಗಿಯೆ ಹೇಳಿದ್ದಾರೆ ಎಂದು ಪುನರೂಚ್ಛರಿಸಿದರು.
ಇತ್ತಿಚೀಗೆ ಭಾಲ್ಕಿಯಲ್ಲಿ ನಡೆದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದಲ್ಲಿ ಭಾಗಿಯಾದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆ ಮಾತನಾಡುವ ಮೂಲಕ ತಾನೋರ್ವ ಬಿಜೆಪಿಯಲ್ಲಿದ್ದಂತೆ ತೋರಿಸಿಕೊಂಡಿರುವರು. ದೇಶದ ರಾಷ್ಟçಪತಿ, ಉಪರಾಷ್ಟçಪತಿ ಹಾಗೂ ರಾಜ್ಯಪಾಲರು ಯಾವುದೇ ಪಕ್ಷದ ಪರವಾಗಿ ಮಾತನಾಡಬಾರದು ಎಂದರು.
ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ ಅವರ ಬಗ್ಗೆ ಮಾತನಾಡಿದ ಅರಳಿ, ಡಾ.ಖರ್ಗೆಯವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಹೊಸಳ್ಳಿ ವಿರೂದ್ಧ ರಾಜ್ಯ ಸರ್ಕಾರ ಸುಮೋಟೊ ಕೇಸ್ ದಾಖಲಿಸಬೇಕು. ಇಲ್ಲ ಎಂದರೆ ನಮ್ಮ ಪಕ್ಷದ ಯಾರೊಬ್ಬರು ಕಾರ್ಯಕರ್ತರು ಅವರ ವಿರೂದ್ಧ ಠಾಣೆಯಲ್ಲಿ ಕೆಸ್ ದಾಖಲಿಸಬೇಕೆಂದು ಅರಳಿ ಒತ್ತಾಯಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸೋದ್ದಿನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ ಜಾಗಿರದಾರ, ಮನ್ನಾನ್ ಸೇಠ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡೆ, ಮಹಾನಗರ ಪಾಲಿಕೆ ಸದಸ್ಯ ಪ್ರಶಾಂತ ದೊಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಪತ್ರಿಕಾಗೋಷ್ಟಿಯಲ್ಲಿದ್ದರು























