Home ಜಿಲ್ಲೆ ಕಳ್ಳತನ ಆರೋಪಿ ಬಂಧನ

ಕಳ್ಳತನ ಆರೋಪಿ ಬಂಧನ


ಲಕ್ಷೆ÷್ಮÃಶ್ವರ,ಮಾ.೨೦: ಲಕ್ಷೆ÷್ಮÃಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಗ್ಲಿ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಮನೆಗಳ್ಳತನವನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಚಮನಸಾಬ. ಸಿ. ಪಾಟೀಲ ಈತನಿಂದ ಕಳುವು ಮಾಡಿದ್ದ ಬೆಳ್ಳಿ ಬಂಗಾರದ ೨೨ ಗ್ರಾಂ ಆಭರಣಗಳು ಹಾಗೂ ನಗದು ಸೇರಿ ೨,೬೦,೦೦೦ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಆರೋಪಿ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಟ್ಟಿಯಲ್ಲಿಯೂ ಕಳುವು ಮಾಡಿದ್ದು ಅಲ್ಲಿನ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.


ಆರೋಪಿಯನ್ನು ಬಂಧಿಸಲು ಎಸ್ ಪಿ ರೋಹನ್ ಜಗದೀಶ್ ಡಿಎಸ್ಪಿ ಮುರ್ತುಜಾ ಖಾದ್ರಿಯವರ ಮಾರ್ಗದರ್ಶನದಲ್ಲಿ ಸಿಪಿಐ ಬಿವಿ ನ್ಯಾಮಗೌಡ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ನಾಗರಾಜ್ ಗಡದ ಮತ್ತು ಜಿಕೆ ರಾಠೋಡ್ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಎಸ್ಪಿ ಮತ್ತು ಡಿಎಸ್ಪಿ ಅವರು ಅಭಿನಂದಿಸಿದ್ದಾರೆ.