
ಕಲಬುರಗಿ:ಮಾ.2:ನಮ್ಮ ಪೂರ್ವಜರುಕಷ್ಟಪಟ್ಟು ಬೆವರು ಸುರಿಸಿ ದುಡಿದು ಕೃಷಿ ಕಾಯಕ ಮಾಡುತ್ತಿದ್ದರು. ಅವರಿಗೆಆಹಾರ ಸಂಸ್ಕøತಿಯ ಬಗ್ಗೆ ಅಪಾರವಾದಜ್ಞಾನವಿತ್ತು.ರಾಸಾಯನಿಕ ವಿಷಮುಕ್ತ ಆಹಾರ ಸೇವೆನ, ಕೆಲಸ ಮಾಡುವುದರಿಂದಅವರದೇಹಗಟ್ಟಿಮುಟ್ಟಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ವಿದೇಶಿ ಫಾಸ್ಟ್, ಜಂಕ್ ಪುಢ್‍ಆಹಾರ ಸೇವನೆ ಮಾಡದೆ, ದೇಶಿಯ ಸಾವಯುವಆಹಾರ, ಸಿರಿಧಾನ್ಯಗಳ ಆಹಾರಉಪಯೋಗಿಸಬೇಕು.ದೇಶಿಯಆಹಾರದಲ್ಲಿ ನಮ್ಮಆರೋಗ್ಯದಗುಟ್ಟುಅಡಗಿದೆಎಂದುಉಪನ್ಯಾಸಕ, ಕನ್ನಡಜಾನಪದ ಪರಿಷತ್‍ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ಕಡಗಂಚಿಗ್ರಾಮದ ಪ್ರಗತಿಪರರೈತ ಕಾಶಿನಾಥ ಚೇಂಗಟಿಅವರ ಹೊಲದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರಜರುಗಿದ’ಸಿಹಿತೆನೆ ಸಂಭ್ರಮ’ ಕಾರ್ಯಕ್ರಮ’ದಲ್ಲಿಅವರು ಮಾತನಾಡಿದರು.
ರೈತದೇಶದ ಬೆನ್ನೆಲುಬು, ಸಮಾಜಕ್ಕೆಅನ್ನವನ್ನು ನೀಡಿಎಲ್ಲರನ್ನು ಬದುಕಿಸುವಅನ್ನದಾತ. ನಗರೀಕರಣ ಮತ್ತು ವಿದೇಶಿ ಸಂಸ್ಕøತಿಗೆ ಮಾರುಹೋಗಿದೇಶದ ಮೂಲ ಕಸಬಾದ ಕೃಷಿ ಕಾಯಕದಿಂದದೂರ ಸರಿಯುವುದು ಬೇಡ.ರೈತಕಷ್ಟಪಟ್ಟುದುಡಿದುಅದರ ಫಲ ಕೇವಲ ತಾನಷ್ಟೇಅಲ್ಲ, ಜೊತೆಗೆಸಮಾಜದೊಂದಿಗೆ ವಿನಿಯೋಗಮಾಡುವಕೃಷಿ ಸಂಸ್ಕøತಿ ಬಹಳ ದೊಡ್ಡದು. ಜೋಳಉತ್ತರಕರ್ನಾಟಕದ ಪ್ರಮುಖಆಹಾರ ಬೆಳೆಯಾಗಿದೆ. ರೈತರು ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದರಿಂದ ಜೋಳದ ಉತ್ಪಾದನೆಕಡಿಮೆಯಾಗುತ್ತಿದೆ. ಇದರಿಂದಆಹಾರ, ದನ-ಕರುಗಳಿಗೆ ಮೇವಿನ ಕೊರೆತೆಕಂಡುಬರುತ್ತಿದೆ.ಸಿಹಿತೆನೆಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿದ್ದು ಅದರ ಸೇವನೆ ಅಗತ್ಯವಾಗಿದೆಎಂದರು.
ಪ್ರಗತಿಪರರೈತ ಕಾಶಿನಾಥ ಚೇಂಗಟಿ ಮಾತನಾಡಿ, ಕಷ್ಟಪಟ್ಟುದುಡಿಯುವರೈತರಿಗೆ ಭೂತಾಯಿ ಹರಿಸುತ್ತಾಳೆ.ಕೃಷಿಯಲ್ಲಿ ಬಹುಬೆಳೆ ಪದ್ದತಿಯನ್ನುಅನುಸರಿಸಬೇಕುಎಂದುತಮ್ಮಕೃಷಿಯಯಶೋಗಾಥೆಯನ್ನು ವಿವರಿಸಿದರು.ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ರೈತರಾದ ಸುಷ್ಮಾಕೆ.ಚೇಂಗಟಿ, ತಿಪ್ಪಣ್ಣಚೇಂಗಟಿ, ಶಿವಶಂಕರ ಕೆ, ರೇವಣಸಿದ್ದಪ್ಪ ಸಂಗೋಳಗಿ ಸೇರಿದಂತೆಇನ್ನಿತರರಿದ್ದರು.






















