Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ವಸತಿಗೃಹ ಉಸ್ತುವಾರಿಗಳ ಪಾತ್ರ ಮಹತ್ವದ್ದು

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ವಸತಿಗೃಹ ಉಸ್ತುವಾರಿಗಳ ಪಾತ್ರ ಮಹತ್ವದ್ದು

ಕಲಬುರಗಿ,ಜು.10: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ ಹಾಸ್ಟೆಲ್ ಕೇರ್ ಟೇಕರ್ (ವಸತಿಗೃಹ ಉಸ್ತುವಾರಿ) ಗಳಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಜಾಗೃತಿ, ಗುರುತಿಸುವಿಕೆ ಮತ್ತು ಪ್ರತಿಕ್ರಿಯೆ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಯುಕೆಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಹಾಗೂ ಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಅವರು ಮಾತನಾಡಿ, ನಮ್ಮ ವಿ.ವಿ.ಯ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಅವರ ಸುರಕ್ಷತೆ ಮತ್ತು ಯೋಗಕ್ಷೇಮ ವಿಚಾರಿಸುವಲ್ಲಿ ಹಾಸ್ಟೆಲ್ ಕೇರ್‍ಟೇಕರ್‍ಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಹೇಳಿದರು.
ನಮ್ಮ ವಿ.ವಿ.ಯ ಹಾಸ್ಟೆಲ್ ವಿದ್ಯಾರ್ಥಿಗಳ ವಿಭಿನ್ನ ಭಾಷೆಗಳು, ಅವರ ಸಂಸ್ಕøತಿ, ಅವರ ಆಹಾರ ಪದ್ಧತಿ ಹಾಗೂ ವಿವಿಧ ರೀತಿಯಲ್ಲಿ ಸಾಮಾಜಿಕ ಹಿನ್ನೆಲೆಯಿರುತ್ತದೆ. ಇಂತಹ ಬಹುಸಾಂಸ್ಕೃತಿಕ ವಸತಿ ನಿಲಯಗಳ ವಾತಾವರಣದಲ್ಲಿ ನಮ್ಮ ಹಾಸ್ಟೆಲ್ ಕೇರ್‍ಟೇಕರ್‍ಗಳು ಕೇವಲ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಹಾಗೂ ಪೆÇೀಷಕರಂತೆ ಕಾರ್ಯನಿರ್ವಹಿಸಬೇಕೆಂದು ಅವರು ಹೇಳಿದರು. ಹಾಸ್ಟೆಲ್ ಕೇರ್‍ಟೇಕರ್‍ಗಳ ಸಮರ್ಪಣೆ, ಸೂಕ್ಷ್ಮತೆ ಹಾಗೂ ಸಮಯೋಚಿತ ಬೆಂಬಲವು ವಿದ್ಯಾರ್ಥಿಗಳ ಆರೋಗ್ಯಕರ, ಸಮಾನತೆ ಆಧಾರಿತ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಅವರು ಹೇಳಿದರು.
ವಿಶೇಷವಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಕಾಲೇಜಿನ ತರಗತಿಗಳ ಸಂದರ್ಭದಲ್ಲಿ ಕಡ್ಡಾಯವಾಗಿ ಅವರ ಹಾಜರಾತಿಯನ್ನು ಪರಿಶೀಲಿಸುವುದು, ರಾತ್ರಿಯ ಸಂದರ್ಭದಲ್ಲಿ ಹಾಸ್ಟೆಲ್‍ಗಳಲ್ಲಿ ಅವರ ಸುರಕ್ಷತೆ ಮತ್ತು ಯೋಗಕ್ಷೇಮ, ಹಾಗೂ ಉಪಸ್ಥಿತಿ ಖಚಿತಪಡಿಸಿಕೊಳ್ಳುವುದು ಹಾಗೂ ಅವರ ದೈಹಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳ ಯಾವುದೇ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದ ಪರಿಹರಿಸಬೇಕೆಂದು ಎಂದು ಹೇಳಿದರು.
ನಮ್ಮ ವಿ.ವಿ.ಯ ಹಾಸ್ಟೆಲ್‍ಗಳ ಆಹಾರದ ಗುಣಮಟ್ಟ ಮತ್ತು ಪ್ರಮಾಣ, ಹಾಸ್ಟೆಲ್‍ನ ಶುಚಿತ್ವ, ನೈರ್ಮಲ್ಯ, ಭದ್ರತೆ, ಆರೋಗ್ಯ ಸೇವೆಗಳು ಹಾಗೂ ಇತರ ಅಗತ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಮತ್ತು ಮೇಲಿಂದ ಮೇಲೆ ನಿಗಾ ವಹಿಸಬೇಕು.
ಕಾರ್ಯಾಗಾರದಲ್ಲಿ ಸಿಯುಕೆ ಸಲಹೆಗಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಉತ್ತರ ಯು.ವಿ. ಮತ್ತು ಸಂದೇಶ್ ಜೆ.ಆರ್. ಅವರು ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು, ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನ ನಡೆಸುವುದು ಹೇಗೆ, ಕಠಿಣ ಸವಾಲಿನ ಸಂದರ್ಭಗಳನ್ನು ಸಹಾನುಭೂತಿಯಿಂದ ನಿರ್ವಹಿಸುವುದು ಹೇಗೆ ಹಾಗೂ ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ಮತ್ತು ನೆರವು ಒದಗಿಸುವ ಕುರಿತು ವಿಶೇಷವಾಗಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವಿ.ವಿ.ಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ. ಮಲ್ಲಿಕಾರ್ಜುನ್ ಹೂಗಾರ್, ವಿ.ವಿ.ಯ ಮುಖ್ಯ ಹಾಸ್ಟೆಲ್ ವಾರ್ಡನ್ ಡಾ. ಬಸವರಾಜ ಸೋಮನಮರಡಿ, ವಿದ್ಯಾರ್ಥಿ ಕಲ್ಯಾಣ ಡೀನ್ ಕಚೇರಿಯ ಸಿಬ್ಬಂದಿಗಳಾದ ಚರಣ್ ಸ್ವಾಗತಿಸಿದರು. ಅರುಣ್‍ಕುಮಾರ್ ಅವರು ವಂದಿಸಿದರು. ವಿ.ವಿಯ 7 ವಿದ್ಯಾರ್ಥಿ ವಸತಿ ನಿಲಯಗಳ ಹಾಗೂ 5 ವಿದ್ಯಾರ್ಥಿನಿಯರ ವಸತಿ ನಿಲಯಗಳ ಹಾಸ್ಟೆಲ್ ಮೇಲ್ವಿಚಾರಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.