Home ಜಿಲ್ಲೆ ಕಲಬುರಗಿ ಕಾಂಗ್ರೆಸ್ ಸರ್ಕಾರದಿಂದ ವಿಶ್ವಕರ್ಮ ಸಮಾಜಕ್ಕೆ ನಿರಂತರ ಅನ್ಯಾಯ

ಕಾಂಗ್ರೆಸ್ ಸರ್ಕಾರದಿಂದ ವಿಶ್ವಕರ್ಮ ಸಮಾಜಕ್ಕೆ ನಿರಂತರ ಅನ್ಯಾಯ

ಕಲಬುರಗಿ,ಜು.10-ಕಳೆದ ಹಲಾವರು ವರ್ಷಗಳಿಂದ ವಿಶ್ವಕರ್ಮ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತರುವಲ್ಲಿ ಶ್ರಮವಹಿಸಿದೆ. ಅನೇಕ ಮುಖಂಡರುಗಳನ್ನು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಯಾವುದೇ ಸ್ಥಾನ ಮಾನ ನೀಡದೇ ಮತ್ತು ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸುತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ವಿಶ್ವಕರ್ಮ ಹೋರಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೇಳಿಕೆಯೊಂದನ್ನು ಹೊರಡಿಸಿರುವ ಅವರು ಪಂಚ ಉದ್ಯೋಗದಿಂದ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿರುವ ವಿಶ್ವಕರ್ಮ ಸಮಾಜವು ಇಂದು ಅತ್ಯಂತ ಸೋಚನಿಯ ಸ್ಥಿತಿಯಲ್ಲಿ ನಿಂತಿದೆ. ಸಮುದಾಯದ ಜನರು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಆದರೆ ನಿಗಮಕ್ಕೆ ಬೇಕಾದ ಆರ್ಥಿಕ ನೆರವು ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬೇಸರ ವ್ಯಕ್ತ ಪಡಿಸಲಾಗುತ್ತದೆ.
ಸಮಾಜದ ಮುಖಂಡರಾದ ಕೆ.ಪಿ. ನಂಜುಂಡಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಬೇಕಾದರೆ ಅವರನ್ನು ವಿಧಾನ ಪರಿಷತ್ತಗೆ ನೇಮಕ ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಕುರ್ಚಿ ಕಚ್ಚಾಟದಲ್ಲಿಯೇ ಕಾಂಗ್ರೆಸ್ ನಾಯಕರು ತಲ್ಲಿಣರಾಗಿರುವುದು ರಾಜ್ಯದ ದುರಾದೃಷ್ಠವಾಗಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ. ಕೆ. ಶಿವಕುಮಾರ ಅವರು ಕೇವಲ ಪ್ರವಾಸದ ಸಿಎಂ ಎನ್ನಿಸಿಕೊಳ್ಳಬಾರದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರ ನೇರವಿಗೆ ಬರಬೇಕಾಗಿದ್ದಿ ಇತ್ತೀಚಿನ ಪ್ರಗತಿ ಸಭೆ ಯಾವುದೇ ನಿರ್ಣಯ ತೆಗೆದುಕೊಳ್ಳದೇ ನೋವಿನ ಸಂಗತಿಯಾಗಿದೆ.
ವಿಶ್ವಕರ್ಮ ಸಮಾಜದಿಂದ ಸರ್ಕಾರಕ್ಕೆ ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆದರೆ ಸಮುದಾಯಕ್ಕೆ ಯಾವುದೇ ಆರ್ಥಿಕ ಬೆಂಬಲ ಇಲ್ಲದಂತಾಗಿದೆ. ಕೂಡಲೇ ವಿಶ್ವಕರ್ಮ ಸಮುದಾಯದ ಮುಖಂಡರನ್ನು ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಬೇಕು. ಬ್ಯಾಂಕ್‍ಗಳಿಂದ ಬಡ್ಡಿ ರಹಿತ ಸಾಲನವನ್ನು ನೀಡಲು ಕ್ರಮಕೈಗೊಳ್ಳಬೇಕು. ವಿಶ್ವಕರ್ಮ ಸಮುದಾಯಗಳಿಗೆ ಅವರ ಉದ್ಯೋಗದ ಮೇಲೆ ಸಲಕರಣೆಗಳನ್ನು ವಿತರಣೆ ಮಾಡಬೇಕು. ಕುಲಕಸಬುಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸಮುದಾಯದ ಯುವಕರಿಗೆ ಉಚಿತ ನೀಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕೂಡಲೆ ವಿಶ್ವಕರ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸದಿದ್ದರೆ ಸರ್ಕಾರದ ವಿರುದ್ಧ ಹೋರಟದ ದಾರಿ ಹಿಡಿಯಬೇಕಾಗುತ್ತಿದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಎಚ್ಚರಿಕೆ ನೀಡಿದ್ದಾರೆ.