Home ಜಿಲ್ಲೆ ಜಗದ್ಗುರು ಶ್ರೀ ಶಂಕರಾಚಾರ್ಯರ ತತ್ವಗಳು ಸರ್ವಕಾಲದಲ್ಲಿಯೂ ಪ್ರಸ್ತುತ

ಜಗದ್ಗುರು ಶ್ರೀ ಶಂಕರಾಚಾರ್ಯರ ತತ್ವಗಳು ಸರ್ವಕಾಲದಲ್ಲಿಯೂ ಪ್ರಸ್ತುತ


ಗದಗ,ಏ.೨೨: ಜಗದ್ಗುರು ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗೆ ಕಾರಣರಾದವರು. ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಸಾರಿದವರು. ಇವರ ತತ್ವಗಳು ಸರ್ವಕಾಲದಲ್ಲಿಯೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.


ನಗರದ ಸಂಬಾಪುರ ರಸ್ತೆಯಲ್ಲಿನ ಶ್ರೀ ಶಂಕರ ಮಠದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಶಂಕರಾಚಾರ್ಯರು ೮ ನೇ ಶತಮಾನದಲ್ಲಿದ್ದವರು. ಸನಾತನ ಸಂಸ್ಕöÈತಿ ವಿನಾಶದ ಅಂಚಿನಲ್ಲಿದ್ದಾಗ ಶಂಕರಾಚಾರ್ಯರು ಸನಾತನ ಪರಂಪರೆಯನ್ನು ಪುನರ್‌ಸ್ಥಾಪನೆ ಮಾಡಿದ ಮಹಾನ್ ಚೇತನರಾಗಿದ್ದಾರೆ. ಸನಾತನ ಧರ್ಮವು ಜೀವನದ ಶೈಲಿಯಾಗಿದೆ. ಆರೋಗ್ಯ ಮತ್ತು ನೆಮ್ಮದಿ ಇದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದಾಗಿದೆ. ಅಂದಿನ ದಿನಗಳಲ್ಲಿ ಶಂಕರಾಚಾರ್ಯರು ಧರ್ಮ ರಕ್ಷಣೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಸಂಚರಿಸಿದರು. ಲೋಕ ಕಲ್ಯಾಣದಲ್ಲಿ ತೊಡಗಿದ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ತತ್ವ ಪ್ರತಿಪಾದಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಿರಿಯ ಅಭಿವೃದ್ಧಿ ಅಧಿಕಾರಿ ಹಾಗೂ ಸಂಸ್ಕöÈತಿ ಚಿಂತಕರಾದ ಎಂ.ಟಿ.ಭಟ್ ಅವರು ಉಪನ್ಯಾಸ ನೀಡಿ ಮಾತನಾಡಿ ಶಂಕರಾಚಾರ್ಯರು ಕೇರಳದಲ್ಲಿ ವೈಶಾಖ ಶುದ್ಧ ಪಂಚಮಿಯAದು ಜನಿಸಿದರು. ಆತ್ಮ ಮತ್ತು ಪರಮಾತ್ಮ ಎರಡೂ ಬೇರೆ ಬೇರೆ ಅಲ್ಲ. ಎರಡೂ ಒಂದೇ. ಆತ್ಮನೆ ಪರಮಾತ್ಮ ಎಂದು ಸಾರಿದವರು. ಶಂಕರಾಚಾರ್ಯರು ಅದ್ವೆöÊತ ವೇದಾಂತವನ್ನು ಪ್ರತಿಪಾದಿಸಿದವರು. ಸನಾತನ ಧರ್ಮದ ಉಳಿವಿಗಾಗಿ ಕಾಲ್ನಡಿಗೆಯಲ್ಲಿ ದೇಶದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿದವರು. ಧಾರ್ಮಿಕ ಹಾಗೂ ಆಧ್ಮಾತ್ಮಿಕ ಲೋಕಕ್ಕೆ ಶಂಕರಾಚಾರ್ಯರು ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಿದ ಅವರು ಅದ್ವೆöÊತ ಮತ್ತು ಸಾಮರಸ್ಯ ವಿಚಾರದ ಕುರಿತು ವಿವರವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಹಿರಿಯರಿಗೆ ಸನ್ಮಾನಿಸಲಾಯಿತು.
ರಾಮಚಂದ್ರ ಮೋನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಭಾರತದಾದ್ಯಂತ ತತ್ವ ಜ್ಞಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತತ್ವಜ್ಞಾನಿಗಳಲ್ಲಿಯೇ ಮೇರು ಶಿಖರದಲ್ಲಿರುವ ಜಗದ್ಗುರು ಆದಿ ಶಂಕರಾಚಾರ್ಯರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಶಂಕರಾಚಾರ್ಯರು ಅದ್ವೆöÊತ ತತ್ವವನ್ನು ಪ್ರತಿಪಾದಿಸಿದವರು. ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ವೇದಮೂರ್ತಿ ರತ್ನಾಕರ್‌ಭಟ್ ಜೋಶಿ, ಡಾ.ಕುಶಾಲ ಗೋಡಖಿಂಡಿ, ಆನಂದ ಗೋಡಖಿಂಡಿ, ದತ್ತಾತ್ರೇಯ ಜೋಶಿ, ಸುಮನ ಪಾಟೀಲ, ವೆಂಕಟೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ಸುಧೀಂದ್ರ ದೇಶಪಾಂಡೆ, ದತ್ತಣ್ಣ ಜೋಶಿ, ಗಿರೀಶ ಪಂತರ, ಅನಿಲ ತೆಂಬದಮನಿ, ರವೀಂದ್ರ ಜೋಶಿ, ಆರ್.ಎಸ್.ಕುಲಕರ್ಣಿ, ಕೃಷ್ಣ ನಾಡಿಗೇರ ಸೇರಿದಂತೆ ಸಮಾಜದ ಹಿರಿಯರು, ಗಣ್ಯರು, ಮುಖಂಡರು ಹಾಜರಿದ್ದರು.


ವೇದಮೂರ್ತಿ ಶಂಕರಭಟ್ ಸೊರಟೂರ, ವೇದಮೂರ್ತಿ ದತ್ತಂಭಟ್ಟ ತೆಂಬದಮನಿ, ವೇದಮೂರ್ತಿ ಗಣೇಶ ಭಟ್ ಪುರಾಣಿಕ ಇವರು ವೇದಘೋಷ ನಡೆಸಿಕೊಟ್ಟರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದತ್ತಪ್ರಸನ್ನಪಾಟೀಲ ಕಾರ್ಯಕ್ರಮ ನಿರೂಪಿಸಿದರು.