
ಬೀದರ:ಏ.4:ನೀ ನೊಲಿದರೆ ಕೊರಡು ಕೊನರುವುದಯ್ಯ ಎನ್ನುವುದಕ್ಕೆ ಅಕ್ಕಮಹಾದೇವಿ ಜಯಂತಿಯಲ್ಲಿ ಸಮಾವೇಶಗೊಂಡ ಶರಣರೆ ಸಾಕ್ಷಿ. ಕೇವಲ 24 ಗಂಟೆಯೊಳಗೆ ಇಂತಹ ಅತ್ಯದ್ಭುತ ಕಾರ್ಯ ಮಾಡಿರುವುದು ಬಸವ ಕೇಂದ್ರ ಎನ್ನುವುದು ಅಭಿಮಾನ. ಅಕ್ಕ ಸರ್ವಜನಾಂಗದ ಅನಘ್ರ್ಯ ರತ್ನ ಎಂದು ಪೂಜ್ಯ ನಿಜಗುಣಾನಂದ ಸ್ವಾಮಿಗಳು ಅಕ್ಕಮಹಾದೇವಿ ಜಯಂತಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಬಸವ ಕೇಂದ್ರ ಹಾಗೂ ಎಲ್ಲ ಬಸವ ಪರ ಸಂಘಟನೆಗಳ ಸಹಯೋಗದೊಂದಿಗೆ ಬಸವೇಶ್ವರ ವೃತ್ತದಿಂದ ಅಕ್ಕಮಹಾದೇವಿ ಭಾವಚಿತ್ರ ಹಾಗೂ ಶರಣೆ ಸುಲಕ್ಷಾ ಕೈರಾ ಅವರು ಅಕ್ಕಮಹಾದೇವಿ ವೇಷ ಧರಿಸಿದ ರಥದ ಭವ್ಯ ಮೆರವಣಿಗೆಗೆ ಡಾ ರಜನೀಶ ವಾಲಿ ಚಾಲನೆ ನೀಡಿದರು. ತದನಂತರ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಾವಿರಾರು ಮಹಿಳೆಯರು ಪುರುಷರು ವಚನಗಳ ಆಧಾರಿತ ಡಿಜಿ ಮೇಲೆ
ಕುಣಿದು ಕುಪ್ಪಳಿಸುತ್ತ ಬೊಮ್ಮಗೊಂಡೇಶ್ವರ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಮುಖಾಂತರ ಬಿ ವಿ ಬಿ ಕಾಲೇಜು ಆವರಣ ತಲುಪಿತು, ಅಲ್ಲಿಯೇ ಎಲ್ಲರಿಗೆ ಬಾಳೆ ಹಣ್ಣು ವಿತರಿಸಲಾಯಿತು.
ಪೂಜ್ಯರು ಮಾತನಾಡುತ್ತ ಶರಣರ ದೃಷ್ಟಿಯಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲ, ಇಂದಿನ ಪುರುಷ ಪ್ರಧಾನವಾದ ಕಾಲಘಟ್ಟದಲ್ಲಿ ಮಹಿಳೆಗೆ ಇನ್ನು ಸಮಾನತೆ ಮರಿಚೀಕೆಯಾಗುತ್ತಿದೆ. ಆದರೆ 12ನೇ ಶತಮಾನದಲ್ಲಿ ಸರ್ವರೀತಿಯಿಂದ ಸಮಾನತೆ ಕೊಟ್ಟವರು ಬಸವಣ್ಣನವರು. ಮಾತೃ ದೇವೋಭವ ಎಂದರೂ ಹೆಣ್ಣುಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ. ಬಸವಣ್ಣ ತನ್ನ ಅಕ್ಕನ ಪರಿಸ್ಥಿತಿ ನೋಡೆ ಸಮಾನತೆ ಧರ್ಮ ಸ್ಥಾಪಿದ್ದಾರೆ. ತಾಯಿ ನಮ್ಮೆಲ್ಲರ ಸ್ವಾಭಿಮಾನ ಅμÉ್ಟ ಅಲ್ಲದೆ ಕುಟುಂಬ ಹಾಗೂ ಸಂಸ್ಕ್ರತಿಯ ತಾಯಿ ಬೇರು ಎಂದರು. ನೇತೃತ್ವ ವಹಿಸಿದ ಪೂಜ್ಯ ಶ್ರೀ ಡಾ ಅಕ್ಕ ಗಂಗಾಂಬಿಕೆ ಮಾತನಾಡುತ್ತ ಪ್ರಪಂಚದ ಇತಿಹಾಸದಲ್ಲಿ ಅನೇಕ ಕ್ರಾಂತಿಗಳು ಹೆಣ್ಣು ಮಣ್ಣು ಹೊನ್ನಿಗಾಗಿ ನಡೆದಿವೆ ಆದರೆ ಕಲ್ಯಾಣ ಕ್ರಾಂತಿ ಸಮಾನತೆಗಾಗಿ ನಡೆದಿರುವುದು ಐತಿಹಾಸಿಕ ದಾಖಲೆ. ಹೆಣ್ಣುಮಕ್ಕಳು ಸುಸಂಸ್ಕøತ ರಾದರೆ ಸಮಾಜ ಸಮೃದ್ಧಿ, ತಾಯಿಯ ತಾಳ್ಮೆ ಎಲ್ಲಿಯೂ ಸಿಗುವುದಿಲ್ಲ. ಅಕ್ಕನಾಗಮ್ಮ ತಾಯಿ ಇಡೀ ವಚನ ಸಂರಕ್ಷಣೆ ಮಾಡಿದ್ದಾರೆ.
ನೀಲಮ್ಮ ತಾಯಿ ದಾಸೋಹ ಕಲ್ಪನೆಯನ್ನು ಮೂಡಿಸಿದರೆ 36 ಶರಣೆಯರು ಶಾಲೆ/ ಕಾಲೇಜು ಗಳಿಗೆ ಹೋಗದೆ ವಚನಗಳು ರಚಿಸಿರುವುದು ನಮ್ಮೆಲ್ಲರ ಭಾಗ್ಯ.
ಅಕ್ಕಮಹಾದೇವಿ ಜಗತ್ತಿನ ಪ್ರಪ್ರಥಮ ಮಹಿಳಾ ಕವಯತ್ರಿಯಾಗಿದ್ದಾರೆ ಎಂದರು. ನಟಿ ಸುಲಕ್ಷಾ ಕೈರಾ ಅವರಿಗೆ ಜಗನ್ಮಾತೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಿದ ದಕ್ಷಿಣ ಮತಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಮಾತನಾಡಿ.. ನಮ್ಮಲ್ಲಿ ಒಂದು ಭವ್ಯ ಪರಂಪರೆ ಇದೆ. ಅಂದು ಪ್ರಥಮ ಪಾರ್ಲಿಮೆಂಟ್ ಎನಿಸಿದ ಅನುಭವ ಮಂಟಪದಲ್ಲಿ 770 ಅಮರಗಣಂಗಗಳು ಇದ್ದರು. ಅವರೆಲ್ಲರೂ ಇಂದಿನ ಲೋಕಸಭಾ ಸದಸ್ಯರಿದ್ದ ಹಾಗೆ ಅನೇಕ ಚರ್ಚೆ, ಸಂವಾದ ಗಳಾಗಿ ವಚನಗಳು ಹೊರಬರುತ್ತಿದ್ದವು. ಅಂದೆ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಕಲ್ಪಿಸಿದವರು ಬಸವಣ್ಣನವರು, ಇಂದಿಗೂ ಅದು ಪ್ರಜಾಪ್ರಭುತ್ವದಲ್ಲಿ ಕಾನೂನು ಮಾಡಿ ಅನುμÁ್ಠನ ಮಾಡಲು ಅನೇಕ ಕಗ್ಗಂಟಾಗುತ್ತಿದೆ. ಅಕ್ಕಮಹಾದೇವಿ ವೈರಾಗ್ಯ ನಿಧಿ ಅಂಥವರ ಜಯಂತಿ ಸರಕಾರವೇ ಆಚರಿಸಿದರೆ ಇನ್ನು ಗೌರವ ಬರುತ್ತದೆ. ನಾವೆಲ್ಲರೂ ಸರಳವಾದ ತತ್ತ್ವ ಸಿದ್ಧಾಂತ ಬಿಟ್ಟು ಕಷ್ಟಕ್ಕೆ ಮಾರಿ ಹೋಗಿ ಹೈರಾಣಾಗಿದ್ದೇವೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ತತ್ವ್ತ ಹೇಳಲು ಬಲು ಸುಲಭ ಆದರೆ ಅನುμÁ್ಠನ ತುಂಬಾ ಕಷ್ಟ ವಾಗಿದೆ. ಸಿಟ್ಟು, ದ್ವೇಷ, ಅಹಂಕಾರ, ಪರನಿಂದೆ ಬಿಟ್ಟು ಎಲ್ಲರೂ ಸೌಹಾರ್ದ ತೆಯಿಂದ ನೆಮ್ಮದಿ ಜೀವನ ಸಾಗಿಸಲು ವಚನಗಳೇ ನಮಗೆ ದಾರಿದೀಪವಾಗಿವೆ. ಪ್ರತಿ ಎಲ್ಲರೂ ಒಂದೆರಡು ವಚನಗಳು ಓದಿ ಜೀವನ ಪಾವನ ಮಾಡಿ ಕೊಂಡಾಗ ಮಾತ್ರ ಅಕ್ಕನ ಜಯಂತಿ ಸಾರ್ಥಕ. ಮುಂದಿನ ವರ್ಷ ಸಹ ಅಕ್ಕಮಹಾದೇವಿ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದರು.
ಬ್ರಿಮ್ಸ್ ನಿರ್ದೇಶಕರಾದ ಡಾ ಶಾಂತಲಾ ಆರ್ ಕೌಜಲಗಿ ಬೆಟ್ಟದಾ ಮೇಲೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದೊಡೆ ಎಂತಯ್ಯ ಎಂಬ ಅಕ್ಕನ ವಚನ ಪಠಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ವೇದಿಕೆ ಮೇಲೆ ಅಧ್ಯಕ್ಷತೆಯನ್ನು ಡಾ ವಿದ್ಯಾವತಿ ಬಲ್ಲೂರು ಅಧ್ಯಕ್ಷರು ಬಸವ ಕೇಂದ್ರ ಮಹಿಳಾ ಘಟಕ ಬೀದರ ವಹಿಸಿದರು.
ಶರಣೆ ಸುಲಕ್ಷಾ ಕೈರಾ ಅಕ್ಕಮಹಾದೇವಿ ಚಲನ ಚಿತ್ರ ನಟಿ ಅವರಿಗೆ ಹಾಗೂ ಶ್ರೀಲತಾ ಸ್ವಾಮಿ ಪ್ರಾಚಾರ್ಯರು ನ್ಯಾಶನಲ್ ಪಬ್ಲಿಕ್ ಶಾಲೆ ಬೀದರ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ ವಿಜಯಶ್ರೀ ಬಶೆಟ್ಟಿ ಬಸವ ಸೇವಾ ಪ್ರತಿμÁ್ಠನ ಬೀದರ ಶರಣೆ ನೀತಾ ಡಾ ಶೈಲೇಂದ್ರ ಬೆಲ್ದಾಳೆ ಬೀದರ ಶರಣೆ ಡಾ ದೇವಕಿ ನಾಗೂರೆ ಖ್ಯಾತ ವೈದ್ಯರು ಬೀದರ ಶರಣೆ ಸಂತೋಷಿ ಅರುಣ ಹೊತಪೇಟ್ ಸದಸ್ಯರು ಮಹಾನಗರ ಪಾಲಿಕೆ ಬೀದರ ಶರಣೆ ಉಲ್ಲಾಸಿನಿ ವಿಕ್ರಮ ಮುಧಾಳೆ ಸದಸ್ಯರು ಮಹಾನಗರ ಪಾಲಿಕೆ ಬೀದರ ಶರಣೆ ಅಂಜನಾ ಡಾ ರಜನೀಶ ವಾಲಿ ಸಮಾಜ ಸೇವಕರು ಬೀದರ ಶರಣೆ ರತ್ನಾ ರಾಜಶೇಖರ ಪಾಟೀಲ ಅಧ್ಯಕ್ಷರು ಅಕ್ಕಮಹಾದೇವಿ ಮಂಡಳ ಬಸವ ನಗರ ಬೀದರ ಶರಣೆ ನೀಲಮ್ಮ ರೋಗನ್ ಮಾಜಿ ಜಿ.ಪಂ.ಸದಸ್ಯರು ಬೀದರ ಶರಣೆ ಸುವರ್ಣ ಬಸವರಾಜ ಧನ್ನೂ ರ ಬೀದರ ಶರಣೆ ವಿಜಯಲಕ್ಷ್ಮಿ ಕೌಟಗೆ ಹಿರಿಯ ಸಾಹಿತಿಗಳು ಬೀದರ ಶರಣೆ ಮಂಗಲಾ ಪಾಟೀಲ ಅಧ್ಯಕ್ಷರು, ಕದಳಿ ವೇದಿಕೆ ಬೀದರ ಶರಣೆ ಶಾಂತಾ ಜೈರಾಜ ಖಂಡ್ರೆ ಅಧ್ಯಕ್ಷರು ಪಿ ಕೆ ಪಿ ಎಸ್ ಸಿದ್ದೇಶ್ವರ ಡಾ ಕಲಾವತಿ ಬಿರಾದಾರ ಸ್ತ್ರೀರೋಗ ತಜ್ಞರು ಬೀದರ ಶರಣೆ ಜಯದೇವಿ ಯದ್ಲಾಪೂರೆ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಬೀದರ ಶರಣೆ ಪಾರ್ವತಿ ಸೋನಾರೆ ಅಧ್ಯಕ್ಷರು ಕ ರಾ ಸರಕಾರಿ ನೌಕರರ ಸಂಘ ಮಹಿಳಾ ಘಟಕ ಬೀದರ
ಶರಣೆ ಶಿವಲಿಲಾ ಧನರಾಜ ಹಂಗರಗಿ ಹಳ್ಳದಕೇರಿ ಬೀದರ ಶರಣೆ ಪಂಪಾವತಿ ಪಾಟೀಲ ಉಪಾಧ್ಯಕ್ಷರು ಮಹಿಳಾ ಬಸವ ಕೇಂದ್ರ ಬೀದರ ಶರಣೆ ಶೀಲಾವತಿ ಶೀಲವಂತ ಉಪಾಧ್ಯಕ್ಷರು ಮಹಿಳಾ ಬಸವ ಕೇಂದ್ರ ಬೀದರ ಶರಣೆಜ್ಞಾನದೇವಿ ಬಬಛಡೆ ನಿರೂಪಣೆ ಮಾಡಿದರೆಸ್ವಾಗತ ಶರಣೆ ಪ್ರತಿಭಾ ವೀರಪ್ಪ ಜೀರಗೆ ವಂದನಾರ್ಪಣೆ ಶರಣೆ ಭಾಗ್ಯಶ್ರೀ ಮಂಜುನಾಥ ಮಾಡಿದರೆ ಆಶ್ವಿನಿ ರಾಜಕುಮಾರ ಸ್ವಾಮಿ ವಚನ ಸಂಗೀತ ನಡೆಸಿ ಕೊಟ್ಟರು. ಅಕ್ಕಮಹಾದೇವಿ ಜಯಂತ್ಯೋತ್ಸವದ ಭವ್ಯ ಮೆರವಣಿಗೆಯಲ್ಲಿ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ನಿಷ್ಕಲ್ ಮಂಟಪ ಬೈಲೂರ.ಪೂಜ್ಯ ಶ್ರೀ ಡಾ. ಗಂಗಾಂಬಿಕೆ ಅಕ್ಕಾ , ಅಧ್ಯಕ್ಷರುಬಸವ ಸೇವಾ ಪ್ರತಿμÁ್ಠನ ಬೀದರ ಶರಣೆ ಶಶಿರೇಖಾ ಪಾಟೀಲ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ ಬೀದರ ಶರಣೆ ಕರುಣಾ ಶಟಕಾರ ಗೌರವಾಧ್ಯಕ್ಷರು ಮಹಿಳಾ ಬಸವ ಕೇಂದ್ರ ಬೀದರ ಡಾ ಶೈಲೇಂದ್ರ ಬೆಲ್ದಾಳೆ ಮಾನ್ಯ ಶಾಸಕರು ಬೀದರ (ದ) ಶರಣ ಸೂರ್ಯಕಾಂತ ನಾಗಮಾರಪಳ್ಳಿ ಅಧ್ಯಕ್ಷರು, ಎನ್ ಎಸ್ ಎಸ್ ಕೆ ಬೀದರ ಶರಣ ಬಸವರಾಜ ಧನ್ನೂರು ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾ ಸಭಾ ಬೀದರ ಶರಣ ಆನಂದ ದೇವಪ್ಪ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಬೀದರಶರಣ ಜಯರಾಜ ಖಂಡ್ರೆ ಅಧ್ಯಕ್ಷರು ಬಸವ ಜಯಂತಿ ಉತ್ಸವ ಸಮಿತಿ ಬೀದರ ಶರಣ ಕುಶಾಲರಾವ ಪಾಟೀಲ ಖಾಜಾಪೂರ ಅಧ್ಯಕ್ಷರು ಲಿಂಗಾಯತ ಸಮಾಜ ಬೀದರ ಶರಣ ರಾಜೇಂದ್ರ ಕುಮಾರ ಗಂದಗೆ ಅಧ್ಯಕ್ಷರು ಸರಕಾರಿ ಹಾಗೂ ಅರೆ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘ ನಿ ಬೀದರ.ಶರಣ ಹಾವಶೆಟ್ಟಿ ಪಾಟೀಲ ಸಹಾಯಕ ಗವರ್ನರ್ ರೋಟರಿ ಕಲ್ಯಾಣ ಝೋನ್ ಬೀದರಶರಣ ನಾಗರಾಜ ಕರ್ಪೂರ ಸಮಾಜ ಸೇವಕರು ಬೀದರ, ಸುರೇಶ ಚೆನ್ನಶೆಟ್ಟಿ ಸೋಮನಾಥ ಕಂದಗೂಳೆ ಡಾ ಶಿವಶಂಕರ ಟೋಕರೆ ರೇವಣಪ್ಪ ಮೂಲಗೆ, ಗುರುನಾಥ ಬಿರಾದಾರ, ವೀರುಪಾಕ್ಷ ದೇವರು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಗುರುನಾಥ ಜಾಂತಿಕರ ವಿಜಯಕುಮಾರ ಆನಂದೆ ರಾಚಪ್ಪ ಪಾಟೀಲ ಅಶೋಕ ವಡಗಾವೆ ಶಿವರಾಜ ಮದಕಟ್ಟಿ ಗುಂಡಪ್ಪ ಬಳತೆ ಉಮೆಶ ಪಾಟೀಲ ಶಕುಂತಲಾ ಬೆಲ್ದಾಳೆ ಸುವರ್ಣ ಚಿಮಕೋಡೆ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.. ಸರಕಾರಿ ಪ್ರಾಥಮಿಕ ಶಾಲೆ ಎಸ್ ಎಮ್ ಕ್ರಿಷ್ಣ ನಗರ ಮಕ್ಕಳಿಂದ ಶರಣೆ ರಾಜಮ್ಮ ಚಿಕಪೇಟ್ ಅವರ ನಿರ್ದೇಶನದಲ್ಲಿ ಅನುಭವ ಮಂಟಪದಲ್ಲಿ ಅಕ್ಕ ನಾಟಕ ಎಲ್ಲರ ಗಮನ ಸೆಳೆಯಿತು




















