Home ಜಿಲ್ಲೆ ಅದ್ದೂರಿ ಕರಿಯಮ್ಮದೇವಿ ಜಾತ್ರೆ

ಅದ್ದೂರಿ ಕರಿಯಮ್ಮದೇವಿ ಜಾತ್ರೆ

ಚನ್ನಮ್ಮನ ಕಿತ್ತೂರು, ಮಾ21: ಸಮೀಪದ ಹಿರೇಅಂಗ್ರೋಳ್ಳಿ ಗ್ರಾಮದ ಯುಗಾದಿ ಪಾಡ್ಯ ದಿನದಂದು ಕಮತ್ ಹೊಲದಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ದ ಕರಿಯಮ್ಮದೇವಿ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.


ಬೆಳಿಗ್ಗೆ ಅಭಿಷೇಕ, ಮಹಾಪೂಜೆ, ಪ್ರಸಾದ ಇನ್ನಿತರ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾದ ಈ ಜಾತ್ರೆ ಸಾಯಂಕಾಲ 6 ಗಂಟೆಯವರೆಗೂ ಜಾತ್ರಾ ಮಹೋತ್ಸವದಲ್ಲಿ ರಾಜ್ಯ, ಜಿಲ್ಲೆ, ತಾಲೂಕು ವಿವಿಧ ಗ್ರಾಮಗಳ ಹಾಗೂ ಸ್ಥಳೀಯ ಗ್ರಾಮಸ್ಥರು ದೇವಿಯ ಕೃಪೆಗೆ ಪಾತ್ರರಾದರು.


ದೇವಿ ಆರಾಧಕ ಬಸಪ್ಪ ಬೀಸರೊಳ್ಳಿ ಇವರ ನೇತೃತ್ವದಲ್ಲಿ ಜಾತ್ರೆ ಜರುಗಿತು. ಈ ಹಿಂದೆ ಮುತ್ತಜ್ಜ-ತಂದೆ ಕಾಲದಿಂದಲೂ ಈ ಜಾತ್ರೆ ಮುಂದೆವರೆಸಿಕೊಂಡು ನಡೆದಿದ್ದಾರೆ. ಪಲ್ಲಕ್ಕಿ ಉತ್ಸವ ಗದ್ದುಗೆಯಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂದು ಕೊನೆಗೆ ಸಂಪನ್ನಗೊಂಡಿತು. ರಾತ್ರಿವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.