Home ಜಿಲ್ಲೆ ಕಲಬುರಗಿ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ:ಶಾಸಕ ಅಲ್ಲಮಪ್ರಭು ಪಾಟೀಲ್

ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ:ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ,ಸೆ.18:ಕರ್ನಾಟಕದ ಐತಿಹಾಸಿಕ ತಾಣಗಳಾದ ಹಂಪಿ, ಪಟ್ಟದಕಲ್ಲು, ಐಹೊಳೆ ಮುಂತಾದವುಗಳ ಸೌಂದರ್ಯಕ್ಕೆ ವಿಶ್ವಕರ್ಮ ಸಮುದಾಯದ ಕಲಾತ್ಮಕ ಕೊಡುಗೆಯೇ ಕಾರಣ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂ ಪ್ರಭು ಪಾಟೀಲ ಅವರು ಶ್ಲಾಘೀಸಿದರು.
ಗುರುವಾರ, ನಗರದ ಡಾ.ಎಸ್.ಎಮ್.ಪಂಡಿತ್ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಿ ಮಾತನಾಡಿದರು.
ತಮ್ಮ ವಿಶಿಷ್ಟ ವಾಸ್ತುಶಿಲ್ಪ ಮತ್ತು ಕಲಾತ್ಮಕ ಮೂರ್ತಿಗಳನ್ನು ಕೆತ್ತಿ ಜೀವ ತುಂಬುವ ಮೂಲಕ ಜಗತ್ತಿಗೆ ಭಾರತೀಯ ಸಂಸ್ಕೃತಿ ಮತ್ತು ಸೌಂದರ್ಯದ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆ ಸಲ್ಲುತ್ತದೆ ಎಂದು ತಿಳಿಸಿದರು.
ವಿಶ್ವಕರ್ಮ ಜಯಂತಿಯ ಶುಭಾಶಯ ಕೋರಿದ ಅವರು,ಸಮುದಾಯದ ಕಟ್ಟಡ ನಿರ್ಮಾಣಕ್ಕೆ ತಮ್ಮ ನಿಧಿಯಿಂದ 25 ಲಕ್ಷ ರೂ. ನೀಡುವ ಭರವಸೆ ನೀಡಿದರು.ಜೊತೆಗೆ, ಇತರ ಶಾಸಕರು ಹಾಗೂ ಸಂಸದರಿಂದಲೂ ಅನುದಾನ ಒಟ್ಟುಗೂಡಿಸಿ ಒಟ್ಟು 50 ಲಕ್ಷ ರೂ.ಗಳಷ್ಟು ನಿಧಿಯನ್ನು ಕಟ್ಟಡ ಕಾಮಗಾರಿಗೆ ಒದಗಿಸಿಕೊಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಅವರು ಮಾತನಾಡಿ ವಿಶ್ವಕರ್ಮ ಸಮುದಾಯವು ತಮ್ಮ ಪಂಚ ಕುಲಕಸುಬುಗಳ ಮೂಲಕ ರೈತರ ಜೀವನಕ್ಕೆ ಆಸರೆಯಾಗುವುದರ ಜೊತೆಗೆ, ಸುಂದರ ಮೂರ್ತಿ ಹಾಗೂ ಆಭರಣಗಳನ್ನು ನಿರ್ಮಿಸಿ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಿದೆ ಎಂದು ಹೇಳಿದರು.
ಈ ಸಮುದಾಯದ ಸವಾರ್ಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮುಂದೆ ಜಿಲ್ಲೆಯಾದ್ಯಂತ ವಿಶ್ವಕರ್ಮ ಸಮುದಾಯದ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ),ಸಹಾಯಕ ಪ್ರಾಧ್ಯಾಪಕ ಲಕ್ಷ್ಮಿಕಾಂತ ಪಂಚಾಳ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಲಬುರಗಿ ವಿಶ್ವಕರ್ಮ ಏಕದಂಡಿ ಮಠದ ಪರಮ ಪೂಜ್ಯ ಶ್ರೀ ಸುರೇಂದ್ರ ಮಹಾಸ್ವಾಮಿಗಳು , ಕಲಬುರಗಿ ವಿಶ್ವಕರ್ಮ ಮೂರುಝಾವದೀಶ್ವರ ಮಠದ ಪರಮ ಪೂಜ್ಯ ಶ್ರೀ ಪ್ರಣವ ನಿರಂಜನ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು ಶ್ರೀ ಸುಭಾಷ ಪಂಚಾಳ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಗದೀಶ್ವರಿ ನಾಶಿ ಅವರು ಸ್ವಾಗತಿಸಿದರು. ಇದಕ್ಕೂ ಮುನ್ನ ನೃತ್ಯ ಕಲಾವಿದರಿಂದ ಭರತನಾಟ್ಯ ಪ್ರದರ್ಶಿಸಲಾಯಿತು.