Home ಜಿಲ್ಲೆ ಬೆಂಗಳೂರು ತಾಸ್ಮಿಯ ಬಾನುಗೆ ಶೇ.೯೦.೫೬ ಅಂಕ

ತಾಸ್ಮಿಯ ಬಾನುಗೆ ಶೇ.೯೦.೫೬ ಅಂಕ

ಕೆಂಗೇರಿ, ಏ. ೨೫ : ಮಂಗನಹಳ್ಳಿ ಅಯಾನ ಇಂಟರ್ನ್ಯಾಷನಲ್ ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಹೊರಹೊಮ್ಮಿದೆ

ವೃತ್ತಿಯಲ್ಲಿ ಕಾರ್ಪೆಂಟರ್ ಆದ ಇಬ್ರಾಹಿಂ ಮಗಳಾದ ತಾಸ್ಮಿಯ ಬಾನು ಎಸ್. ಎಸ್. ಎಲ್. ಸಿ.ಪರೀಕ್ಷೆಯಲ್ಲಿ ಶೇಕಡ ೯೦. ೫೬ ರಷ್ಟು ಅಂಕಗಳನ್ನು ಗಳಿಸಿದ್ದಾಳೆ, ವಿಶೇಷ ಅಂದರೆ ಮುಸ್ಲಿಂ ಸಮುದಾಯದ ಹೆಣ್ಣು ಮಗಳಾದರೂ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವ ಮೂಲಕ ಕನ್ನಡದ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾಳೆ.

ಆ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ.. ವೃತ್ತಿಯಲ್ಲಿ ಸಮೋಸ ಮಾರುವ ವ್ಯಾಪಾರಿಯ ಮಗಳಾದ ವಿದ್ಯಾರ್ಥಿನಿ ಶಬನಂ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುವ ಮೂಲಕ ಸಾಧನೆ ಮಾಡಿದ್ದಾಳೆ. ಶಾಲೆ ಆಡಳಿತ ಮಂಡಳಿಯ ಮುಖ್ಯಸ್ಥರಾದ ಇಕ್ಬಾಲ್ ಪಾಶ ಮಾತನಾಡಿ ಇದೇ ಪ್ರಥಮ ಬಾರಿಗೆ ನಡೆದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸ್ ಆಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.