Home ಜಿಲ್ಲೆ ಬೆಂಗಳೂರು ಒಳಮೀಸಲಾತಿ ಸರ್ಕಾರದ ನಿರ್ಣಯಕ್ಕೆ ಮುನಿಯಪ್ಪ ಸ್ವಾಗತ

ಒಳಮೀಸಲಾತಿ ಸರ್ಕಾರದ ನಿರ್ಣಯಕ್ಕೆ ಮುನಿಯಪ್ಪ ಸ್ವಾಗತ

ಬೆಂಗಳೂರು, ಏ. ೨೫- ಕಳೆದ ೩೫ ವರ್ಷಗಳಿಂದ ಕಗ್ಗಂಟಾಗಿದ್ದ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಪಟ್ಟಂತೆ ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ದಿನಾಂಕ: ೨೪.೦೪.೨೦೨೬ ರಂದು ನಡೆಸಿದ ವಿಶೇಷ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಒಳಮೀಸಲಾಯಿತಿ ಹೋರಾಟ ಸಮಿತಿಯ ಮುಖಂಡ ಮಾರಸಂದ್ರ ಮುನಿಯಪ್ಪ ಸ್ವಾಗತಿಸಿದ್ದಾರೆ.

ಈ ನಿರ್ಣಯದ ಪ್ರಕಾರ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇ. ೫.೨೫ ಮತ್ತು ಅಲೆಮಾರಿ ಸಮುದಾಯಗಳೂ ಸೇರಿದಂತೆ ಇತರ ಎಲ್ಲಾ ಪರಿಶಿಷ್ಟ ಜಾತಿಗಳಿಗೆ ಶೇ. ೪.೫೦ ಹಂಚಿಕೆಯ ಸೂತ್ರವು ಎಲ್ಲಾ ಪರಿಶಿಷ್ಟ ಜಾತಿಗಳಿಗೂ ಅನುಕೂಲವಾಗಲಿದೆ. ಅಲ್ಲದೆ, ಸಾಮಾನ್ಯ ವರ್ಗದಲ್ಲಿರುವ ಲಕ್ಷಾಂತರ ಸಂಖ್ಯೆಯ ನಿರುದ್ಯೋಗಿಗಳಿಗೂ ಈ ನಿರ್ಣಯದಿಂದ ನ್ಯಾಯ ದೊರಕಿದಂತಾಗಿದೆ. ರಾಜ್ಯ ಸರ್ಕಾರವು ಕೈಗೊಂಡಿರುವ ಈ ಸರ್ವಸಮ್ಮತವಾದ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ.

ಈ ಸರ್ವಸಮ್ಮತ ನಿರ್ಣಯದ ಮೂಲಕ ಎಲ್ಲಾ ಪರಿಶಿಷ್ಟ ಜಾತಿಗಳಲ್ಲಿ ಐಕ್ಯತೆ ಮತ್ತು ಸಮನ್ವಯತೆಯನ್ನು ಸಾಧಿಸಿರುವಂತಹ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಅವರ ಸಂಪುಟದ ಎಲ್ಲಾ ಸಚಿವರಿಗೆ ಮುನಿಯಪ್ಪ ಅಭಿನಂದಿಸಿದ್ದಾರೆ.