
ಕಲಬುರಗಿ: ನಗರದ ತಾಲೂಕು ಪಂಚಾಯತಿ ಕಚೇರಿಯಲ್ಲಿಂದು ಕಲಬುರಗಿ ತಾಲೂಕಿನಲ್ಲಿ ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಕುರಿತು ಚರ್ಚಿಸಲು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಜರುಗಿತು.ಅಧಿಕಾರಿಗಳಾದ ಆನಂದ ಸಿಲ್,ಸೈಯದ್ ಪಟೇಲ್,ರಾಮಚಂದ್ರ ಬಿ.ಕೆ ಅವರು ಉಪಸ್ಥಿತರಿದ್ದರು.






















