Home ಜಿಲ್ಲೆ ಬೆಂಗಳೂರು ಚೆನ್ನೈಸ್ ಅಮಿರ್ತಾ ಕಾಲೇಜಿನ ಸಾಧನೆಗೆ ರಾಷ್ಟ್ರಮಟ್ಟದ ಮಾನ್ಯತೆ

ಚೆನ್ನೈಸ್ ಅಮಿರ್ತಾ ಕಾಲೇಜಿನ ಸಾಧನೆಗೆ ರಾಷ್ಟ್ರಮಟ್ಟದ ಮಾನ್ಯತೆ

ಬೆಂಗಳೂರು, ಏ.೨೫, ಚೆನ್ನೈಸ್ ಅಮಿರ್ತಾ ಕಾಲೇಜ್ ಆಫ್ ಹೋಟೆಲ್ ಮ್ಯಾನೆಜ್ ಮೆಂಟ್ & ಎವಿಯೇಷನ್ ಸಂಸ್ಥೆಯ ಚೇರ್ಮನ್ ಆರ್. ಬೂಮಿನಾಥನ್ ಅವರಿಗೆ ಪ್ರತಿಷ್ಠಿತ ‘ಎಜುಕೇಶನ್ ಎಕ್ಸಲೆನ್ಸ್ ಅಂಡ್ ಹಾನರ್ ೨೦೨೬ ಪ್ರಶಸ್ತಿ’ ಲಭಿಸಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ಕ್ಯಾಂಪಸ್‌ನ ಪ್ರಿನ್ಸಿಪಲ್ ಪ್ರೊ. ಸ್ವಾಮಿನಾಥನ್ ಅವರು ಸ್ವೀಕರಿಸಿದ್ದಾರೆ.

ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ನಟ ಧರ್ಮ ಕೀರ್ತಿರಾಜ್, ನಟಿಯರಾದ ಅನುಷಾ ರೈ ಹಾಗೂ ರಿಷಾ ಗೌಡ ಅವರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಧರ್ಮ ಕೀರ್ತಿರಾಜ್, “ವಿದ್ಯಾರ್ಥಿಗಳನ್ನು ತಿದ್ದಿತೀಡಿ ಅವರನ್ನು ಸಂಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ಗೌರವ ನೀಡುವುದು ಸಂತಸದ ವಿಚಾರ” ಎಂದರು. ನಟಿ ಅನುಷಾ ರೈ ಅವರು, “ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮುಖ್ಯ. ಅದೇ ನನಗೆ ಇಂದು ಈ ವೇದಿಕೆಯಲ್ಲಿ ನಿಲ್ಲಲು ಕಾರಣವಾಗಿದೆ” ಎಂದು ಹೇಳಿದರು. ನಟಿ ರಿಷಾ ಗೌಡ ಕೂಡ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಸ್ವೀಕರಿಸಿದ ಪ್ರೊ. ಸ್ವಾಮಿನಾಥನ್ ಅವರು, “ನಮ್ಮ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಿದಕ್ಕೆ ಧನ್ಯವಾದಗಳು. ನಾವು ಇನ್ನಷ್ಟು ಸ್ಪೂರ್ತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇವೆ” ಎಂದು ಹೇಳಿದರು. ಈ ಗೌರವದೊಂದಿಗೆ ಚೆನ್ನೈಸ್ ಅಮಿರ್ತಾ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಏವಿಯೇಷನ್ ಬೆಂಗಳೂರು ವಿಭಾಗವು ಉತ್ತಮ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಏವಿಯೇಷನ್ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.