Home ಜಿಲ್ಲೆ ದೇಶ ವ್ಯಾಪ್ತಿ ಏ.27 ಕೃಷಿ ಪರಿಕರಗಳ ಮಾರಾಟ ಬಂದ್

ದೇಶ ವ್ಯಾಪ್ತಿ ಏ.27 ಕೃಷಿ ಪರಿಕರಗಳ ಮಾರಾಟ ಬಂದ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.25: ಯೂರಿಯಾ ರಸಗೊಬ್ಬರದ ಜೊತೆ ಟ್ಯಾಗಿಂಗ್ ಬಂದ್ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ. ಕೃಷಿ ಪರಿಕರ ಮಾರಾಟಗಾರರ ಸಂಘದಿಂದ  ಏ. 27 ಸೋಮವಾರದಂದು ದೇಶವ್ಯಾಪ್ತಿ ಕೃಷಿ ಪರಿಕರಗಳ ಮಾರಾಟ ಬಂದ್ ಗೆ ಕರೆ ನೀಡಿದ್ದು. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲೂ ಬಂದ್ ನಡೆಸಲಿದೆಂದು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ತಿಮ್ಮನಗೌಡ ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಯೂರಿಯಾ ಮತ್ತು ಇನ್ನಿತರ ರಸಗೊಬ್ಬರಗಳನ್ನು ಎಫ್ ಎಲ್ ಮೂಲಕ ವಿತರಿಸಬೇಕು, ಕೃಷಿ ಪರಿಕರಗಳು ಮಾದರಿ ಕಳಪೆ ಮಟ್ಟದ್ದು ಕಂಡುಬಂದಲ್ಲಿ ಉತ್ಪಾದಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಕೃಷಿ ಪರಿಕರ ಮಾರಾಟಗಾರರನ್ನು ಕೇವಲ ಸಾಕ್ಷಿಯನ್ನಾಗಿ ಮಾಡಬೇಕು. ಎಲ್ಲಾ ರಾಸಾಯನಿಕ ಗೊಬ್ಬರದ ಮಾರಾಟದ ಮೇಲೆ ನಮಗೆ ಲಾಭಾಂಶ 8% ಪ್ರತಿಶತ ನೀಡಬೇಕು. ಬೀಜದ ಸಾತಿ-ಪೋಟಲು ಮಾರಾಟ ಸ್ನೇಹಿಯನ್ನಾಗಿ ಮಾಡಬೇಕು ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ಎಫ್ ಐ ಡಿ ಕೆ ಕಿಸಾನ ತಂತ್ರಾಂಶದ ಮೂಲಕ ವಿತರಿಸುವುದನ್ನು ವಿನಾಯತಿ ನೀಡಬೇಕು. ಅಧಿಕಾರಿಗಳು ತಪಾಸಣೆಗಾಗಿ ಅಂಗಡಿಗಳಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡುವಾಗ “ದಾಳಿ ” ಎನ್ನುವ ಪದದ ಬದಲು ತಪಾಸಣೆ ಮತ್ತು ಅಂಗಡಿಗಳ ಪೋಟೋ ಬಳಸಬಾರದು.

ಎಫ್ ಐ ಡಿ ಮುಖಾಂತರ ರಸಗೊಬ್ಬರ ಮಾರಾಟ ಮಾಡುವ ಆದೇಶವನ್ನು ಸ್ವಾಗತಿಸುತ್ತೇವೆ. ಆದರೆ ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವ ಹಾಗೆ ನೋಡಿಕೊಳ್ಳಬೇಕು ಎಂಬ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗಿದೆ.