
ನವಲಗುಂದ,ಮಾ20 : ವಿದ್ಯಾರ್ಥಿಗಳಿಗೆ ಬಾಲ್ಯ ಜೀವನದಿಂದಲೇ ಕೃಷಿ ಬಗ್ಗೆ ಆಸಕ್ತಿ ಮೂಡಿಸಬೇಕು. ಕಲಿಕೆಯ ಒಂದು ಭಾಗವಾಗಿ ಕೃಷಿ ಚಟುವಟಿಕೆಗಳ ಬಗೆಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.ಪಠ್ಯ ಪುಸ್ತಕದಲ್ಲಿ ಕಡ್ಡಾಯವಾಗಿ ಕೃಷಿ ಬಗೆಗೆ ಪಾಠಗಳನ್ನು ಹೆಚ್ಚಾಗಿ ಸೇರಿಸಬೇಕು ಎಂದು ಸಹಜ ಕೃಷಿಕ ಡಾ, ಶೌಕತ್ ಅಲಿ ಲಂಬೂನವರ ಹೇಳಿದರು.
ಗುಡಿಸಾಗರ-ನಾಗನೂರ ಗ್ರಾಮದ ಶ್ರೀ, ಚ. ಹೊ. ಹೊಳೆಯಣ್ಣವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೃಷಿ ಜಮೀನಲ್ಲಿನ ತೋಟಕ್ಕೆ ಬಂದ ಪ್ರೌಢಶಾಲೆ ಮಕ್ಕಳಿಗೆ ಕೃಷಿ ಕಾಯಕದ ಬಗೆಗೆ ತಿಳಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳ ಹೆಚ್ಚು ಪಾಲಕರು ಭೂಮಿ ಹೊಂದಿರುವದರಿಂದ ಹಾಗೂ ಬಹು ಸಂಖ್ಯಾತ ಪಾಲಕರು ಕೃಷಿಯಲ್ಲಿ ತೊಡಗಿರುವದರಿಂದ ಮಕ್ಕಳಿಗೆ ಕೃಷಿಯ ಬಗೆಗೆ ತರಬೇತಿ ನೀಡಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಿನ ಶಿಕ್ಷಣ, ಕೌಶಲ್ಯ ಬೆಳೆಸಿ ಮಕ್ಕಳಿಗೆ ಭವಿಷ್ಯದ ಬದುಕು ಕಟ್ಟಿಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.” ಎಂದರು
ಪರಿಸರ ಜಾಗ್ರತೆಗಾಗಿ ಹಾಗೂ ವಿವಿಧ ಜಾತಿಯ ಸಸ್ಯ, ಗಿಡ. ಮರ. ಬಳ್ಳಿ, ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಬಗೆಗೆ ಮಕ್ಕಳಿಗೆ ಪ್ರಾತಕ್ಷಿಕೆ ವಿವರಣೆ ನೀಡಿದರು. ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಬಳಸಿ ಹನಿ ನೀರಾವರಿ ಮುಖಾಂತರ ತೋಟ ನಿವ9ಹಣೆ ಹಾಗೂ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ದತಿ ತಿಳಿಸಿ ಕೊಟ್ಟರು. ಮಕ್ಕಳು ಖುಷಿಯಿಂದ ಆಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ, ವಿಜಯಲಕ್ಷ್ಮೀ. ಡಿ. ಕೆ, ಸುಜಾತ. ನಾಯ್ಕರ. ಮಂಜುಕುಮಾರಿ ರಜಪೂತ, ರೇಣವ್ವ. ಮೆಣಸಗಿ, ಅರವಿಂದ. ಪಾಟೀಲ, ಎ. ಬಿ. ಕೊಪ್ಪದ. ಎಲ್, ವಾಯ್. ರಾಯಪ್ಪನವರ, ಮಹದೇವಪ್ಪ. ಬೆಳವಟಗಿ ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿದ್ದರು.
ಇದೇ ಸಂಧರ್ಭದಲ್ಲಿ ಸಹಜ ಕೃಷಿ ಕ್ಷೇತ್ರದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿ ಪಡೆದ ಡಾ, ಶೌಕತ್ ಅಲಿ. ಲಂಬೂನವರವರಿಗೆ ಗೌರವಿಸಲಾಯಿತು. ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ತಿಂಗಳಲ್ಲಿ ತೋಟಕ್ಕೆ ಬೆಟ್ಟಿ ನೀಡಿದ ಶಿಕ್ಷಕಿಯರಿಗೆ ಲಂಬೂನವರ ಅವರು ಗೌರವಿಸಿ ಸತ್ಕರಿಸಿದರು.






















