Home ಜಿಲ್ಲೆ ಕಲಬುರಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ವಿದ್ಯಾರ್ಥಿಗಳು ಅನುಸರಿಸಲಿ:ಕಾಂಬಳೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ವಿದ್ಯಾರ್ಥಿಗಳು ಅನುಸರಿಸಲಿ:ಕಾಂಬಳೆ

ಕಲಬುರಗಿ,ಮೇ.14-ಮಹಿಳೆಯರ ಮಿಸಲಾತಿ ಶಿಕ್ಷಣಕ್ಕಾಗಿ ಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇಂದಿನ ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಂಡು ಅಭ್ಯಾಸ ಮಾಡಿದಾಗ ಮಾತ್ರಜೀವನದಲ್ಲಿ ಏನಾದರೂ ಯಶಸ್ಸು ಕಾಣಲು ಸಾಧ್ಯ ಎಂದು ವಿದ್ಯಾಧರ್ ಆರ್.ಕಾಂಬಳೆ ಹೇಳಿದರು.
ಪಿಲ್ಲೂ ಹೋಮಿ ಇರಾನಿ ಮಹಾ ವಿದ್ಯಾಲಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ ಲೆಕ್ಕಾಧಿಕಾರಿ ಅಂಬಿಕಾ ಕೆ.ಸಿ. ಮತ್ತು ಕಾಲೇಜಿನ ಪ್ರಚಾರ್ಯರಾದ ಡಾ.ಜ್ಯೋತಿ ಎಂ.ಸ್ವಾಮಿ ಮತ್ತು ಕಾರ್ಯಕ್ರಮದ ಸಂಯೋಜಕರು ಶ್ರೀಮತಿ.ಮಾನಂದ ಪಾಟೀಲ್ ಮತ್ತು ಶ್ರೀಮತಿ ಜಗದೇವಿ ಎಸ್ ದಿಗ್ಗಾಂವ್ ಮತ್ತಿತರರು ಉಪಸ್ಥಿತರಿದ್ದರು.