Home ಜಿಲ್ಲೆ ಶ್ರೀ ಕೋಡಿಯಲ್ಲಮ್ಮ ದೇವಿ ಜಾತ್ರೆ

ಶ್ರೀ ಕೋಡಿಯಲ್ಲಮ್ಮ ದೇವಿ ಜಾತ್ರೆ

ಲಕ್ಷ್ಮೇಶ್ವರ,ಏ3: ಪಟ್ಟಣದ ಪುರಾತನ ಪ್ರಸಿದ್ದ ಶ್ರೀ ಕೋಡಿಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಪ್ರದಾಯದಂತೆ ದವನದ ಹುಣ್ಣಿಮೆಯ ದಿನ ಅಪಾರ ಭಕ್ತ ಸಮೂಹದ ಪಾಲ್ಗೊಳ್ಳುವಿಕೆಯೊಂದಿಗೆ ಶೃದ್ಧಾ, ಭಕ್ತಿಯಿಂದ ನೆರವೇರಿತು.


ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿತು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನಾಶೀವಾದ ಪಡೆದುಕೊಂಡರಯ. ಸಂಜೆ ಅದ್ದೂರಿ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ಸೇರಿದ್ಧ ಭಕ್ತ ಸಮೂಹ ದೇವಿಯ ನಾಮಸ್ಮರಣೆ, ಉದೋ ಉದೋ ಉದ್ಘಾರ ಘೋಷಣೆಗೈದರು. ರಥಕ್ಕೆ ಉತ್ತತ್ತಿ, ಬೆಲ್ಲದ ಚೂರು, ಬಾಳೆಹಣ್ಣು ಎಸೆದು ಭಕ್ತಿಯಿಂದ ಬೇಡಿದರು. ಇತ್ತೀಚಿಗೆ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥ ನೋಡಲು ಆಗಮಿಸಿದ್ದು ಕಂಡು ಬಂದಿತಲ್ಲದೇ ಜಾತ್ರೆಯ ವಿಶೇಷ ಮಂಡಕ್ಕಿ, ಮಿರ್ಚಿ ಸವಿದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಶುಕ್ರವಾರ ಸಂಜೆ 5 ಗಂಟೆಗೆ ಕಡುಬಿನ ಕಾಳಗ ಮತ್ತು ಏ04 ರಿಂದ ಮೂರು ದಿನ ಕುಸ್ತಿ ಪಂದ್ಯಾವಳಿ ನಡೆಯಲಿವೆ.