Home ಜಿಲ್ಲೆ ಕ್ರೀಡಾ ಮನೋಭಾವ ಜೀವನ ಗೆಲುವಿನ ದಾರಿ: ಶರಣಪ್ಪ ಮಾನೇಗಾರ ಯರಗೋಳ

ಕ್ರೀಡಾ ಮನೋಭಾವ ಜೀವನ ಗೆಲುವಿನ ದಾರಿ: ಶರಣಪ್ಪ ಮಾನೇಗಾರ ಯರಗೋಳ

ಯಾದಗಿರಿ:ಏ.೨: ಗ್ರಾಮೀಣ ಯುವಕರಲ್ಲಿ ಕ್ರೀಡಾ ಚೈತನ್ಯ ಮೂಡಿಸುವ ನಿಟ್ಟಿನಲ್ಲಿ ಯರಗೋಳ ಗ್ರಾಮದಲ್ಲಿ ಪ್ರೀಮಿಯರ್ ಲೀಗ್-೫ ಕ್ರಿಕೆಟ್ ಟೂರ್ನಮೆಂಟ್ ಸಂಭ್ರಮದಿAದ ಆರಂಭಗೊAಡಿತು. ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಶರಣಪ್ಪ ಮಾನೇಗಾರ ಯರಗೋಳ, ಕ್ರೀಡೆಗಳು ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.

ಕ್ರೀಡೆಗಳಲ್ಲಿ ಭಾಗವಹಿಸುವುದು ಕೇವಲ ಗೆಲುವಿಗಾಗಿ ಅಲ್ಲ, ಬದುಕಿನ ಪಾಠಗಳನ್ನು ಕಲಿಯುವ ಅವಕಾಶವೂ ಆಗಿದೆ. ಮೈದಾನದಲ್ಲಿ ಕಂಡುಬರುವ ಶ್ರಮ, ನಿಯಮಬದ್ಧತೆ ಮತ್ತು ತಂಡ ಮನೋಭಾವವೇ ಜೀವನದ ಸವಾಲುಗಳನ್ನು ಎದುರಿಸಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗದ ಯುವಕರಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಇಂತಹ ಕ್ರೀಡಾ ವೇದಿಕೆಗಳು ಅವರನ್ನು ಹೊರತರುವಲ್ಲಿ ಸಹಾಯಕವಾಗುತ್ತವೆ. ಇಂದಿನ ಯುವಪೀಳಿಗೆ ಕ್ರೀಡೆಯ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ, ರಾಜ್ಯ ಮತ್ತು ದೇಶ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಅವರು ಕರೆ ನೀಡಿದ ಅವರು ಸ್ಪರ್ಧಾತ್ಮಕ ಆಟವು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಇನ್ನೂ

ಈ ಸಂದರ್ಭದಲ್ಲಿ ಯಾದಗಿರಿ ನಗರ ಸಭೆ ಮಾಜಿ ಅಧ್ಯಕ್ಷ ಶಶಿಧರರೆಡ್ಡಿ ಗೌಡ ಹೊಸಳ್ಳಿ , ಪರಶುರಾಮ್ ಚವಾಣ್, ಚಂದ್ರರೆಡ್ಡಿ ಬಂದಳ್ಳಿ, ಸುರೇಶ ಅಲ್ಲಿಪುರ, ಶರಣಪ್ಪ ಮೊಟ್ನಳ್ಳಿ,ಹನುಮಂತ ದೊಡ್ಡಮನಿ, ದೇವಪ್ಪ ಗೌಡ ರಾಚನಹಳ್ಳಿ, ವೀರೇಶ್ ಸಜ್ಜನ್, ರಾಜೂಗೌಡ ಅರಿಕೇರಿ, ಬಸವಲಿಂಗಪ್ಪ ನಾಯಕ್,ವಿನಯ್ ರಾಕಾ, ಆಂಜನೇಯ ಕಟ್ಟಿಮನಿ, ಭೀಮಶ್ಯ ಗೋಡಿಕರ, ಹನಮಂತ ತಳವಾರ, ವೀರೇಶ್ ಗೌಡ, ಸಾಹೇಬ ಗೌಡ ಗಮಾಪಲ್ಲಿ, ಸಾಬಣ್ಣ ಕೋಲ್ಕರ್ , ಚಂದ್ರಪ್ಪ ಇದ್ದಿಲಿ, ಮಂಜುನಾಥ ಮಲ್ಹಾರ, ದೇವಿಂದ್ರಪ್ಪ ಬನಾ ಸೇರಿದಂತೆ ಊರಿನ ಗಣ್ಯರು ಉಪಸ್ಥಿತರಿದ್ದರು..