
ಧಾರವಾಡ,ಏ16: ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿಶ್ವಗುರು ಬಸವೇಶ್ವರರ 892 ನೇ ಹುಟ್ಟುಹಬ್ಬದ ನಿಮಿತ್ತವಾಗಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಕಾಶ ರಟಗೇರಿ ಷಟಸ್ಥಳ ಧ್ವಜಾರೋಹಣ ನೆರವೇರಿಸಿ ನಂತರ ಸಂಸ್ಥೆಯಿಂದ ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಒಳ್ಳೆಯ ಕಾಯಕ ಮಾಡುವುದರಿಂದ ಕೈಲಾಸವನ್ನು ಕಾಣಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಇವರು ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿನ ಸಮಾಜ ಸುಧಾರಣೆಗೆ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಕಾರ್ಯಕ್ರಮ ಸಂಯೋಜನೆ ಮಾಡಿ ನಿರ್ವಹಿಸಿದರು. ಶ್ರೀಮತಿ ಪ್ರಜ್ಞಾನಡಕಟ್ಟಿ ಮತ್ತು ಶ್ರೀಮತಿ ಮಂಜುಳಾ ಪುರದಣ್ಣನವರ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ನಡೆಸಿಕೊಟ್ಟರು. ಲಿಂಗಣ್ಣ ತಳ್ಳಿ ವಂದನಾರ್ಪಣೆ ಮಾಡಿದರು.






















