Home ಜಿಲ್ಲೆ ಕ್ರೀಡೆ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ

ಕ್ರೀಡೆ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ

ಸೈದಾಪುರ:ಮಾ.21:ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಾಯಕವಾಗುತ್ತದೆ. ಈ ಟೂರ್ನಮೆಂಟ್ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಕ್ರೀಡಾಸ್ಫೂರ್ತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿದ್ದಾರೂಢ ಮಠದ ಸೋಮೇಶ್ಚರಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗಣಗೇರಾ ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತ ಹಮ್ಮಿಕೊಂಡ ಎಚ್‍ಪಿಎಲ್ 5 ಕ್ರಿಕೆಟ್ ಟೂರ್ನಮೆಂಟಗೆ ಚಾಲನೆ ನೀಡಿ ಮಾತನಾಡಿದರು. ಯುವಕರು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಈ ವಿದಧ ಸ್ಪರ್ಧೆ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಸೋಲು ಗೆಲುವಿಗೆ ಮಹತ್ವ ಕೊಡದೆ ಕ್ರೀಡೆ ಭಾವನೆಗೆ ಮಹತ್ವ ಕೊಟ್ಟಾಗ ಮಾತ್ರ ಉತ್ತಮ ಸಾಧಕರು ನಾವಾಗುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸವರೆಡ್ಡಿಗೌಡ ತುಮಕೂರ, ಚಂದ್ರುಗೌಡ ತುಮಕೂರ, ಹನುಂತ್ರಯ್ಯಗೌಡ ಕುಸುಮೂರ್ತಿ, ಲಚಮರೆಡ್ಡಿ ಕಲಾಲ, ಇಮಾಮಸಾಬ ಬೋಳೆರ, ಶಿವು ಕಲಾಲ, ನಾಗಾರಜ ಛಲವಾದಿ, ದೊಡ್ಡ ಹಣಮಂತ ಹಜೇರಿ, ಸಿದ್ದಪ್ಪ ಹಜೇರಿ, ಈಶಪ್ಪ ಕಲಾಲ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರೂ, ಸಂಘಟನೆಗೆ ವಿವಿಧ ರೀತಿಯಲ್ಲಿ ನೆರವು ನೀಡಿದರು. ಸಾರ್ವಜನಿಕರು, ಕ್ರೀಡಾಭಿಮಾನಿಗಳು, ಯುವಕರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಿಜೇತ ತಂಡಕ್ಕೆ ದಿ.ಈಶಪ್ಪಗೌಡ ತುಮಕೂರು ಸ್ಮರಣಾರ್ಥ ಪ್ರಥಮ ಬಹುಮಾನ ಹತ್ತು ಸಾವಿರ ಒಂದು ರೂಪಾಯಿ ಮತ್ತು ಕಪ್‍ನ್ನು ಬಸರೆಡ್ಡಿಗೌಡ ತುಮಕೂರು ಹಾಗೂ ದಿ.ಶರಣಪ್ಪಗೌಡ ತುಮಕೂರ ಸ್ಮರಣಾರ್ಥ ಏಳು ಸಾವಿರದ ಐದನೂರಾ ಒಂದು ರೂಪಾಯಿ ಮತ್ತು ಕಪ್‍ನ್ನು ದ್ವಿತೀಯ ಬಹುಮಾನವಾಗಿ ಚಂದ್ರುಗೌಡ ತುಮಕೂರು ಗ್ರಾಮದ ಮುಖಂಡರು ನೀಡಲ್ಲಿದ್ದಾರೆ.