Home ಜಿಲ್ಲೆ ಬಿತ್ತುವ ಗುರಿ ನಿಗದಿ

ಬಿತ್ತುವ ಗುರಿ ನಿಗದಿ


ಲಕ್ಷೆ÷್ಮÃಶ್ವರ,ಮೇ.೨೬: ತಾಲೂಕಿನಲ್ಲಿ ಸನ್ ೨೦೨೬ ೨೭ ನೇ ಸಾಲಿಗಾಗಿ ಒಟ್ಟು ೩೪,೮೬೫ ಹೆಕ್ಟೆರ್ ಸಾಗುವಳಿ ಜಮೀನಿನಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ಹೇಳಿವೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಹೆಸರು ಶೇಂಗಾ ಸೂರ್ಯಕಾಂತಿ ಹತ್ತಿ ಮತ್ತು ತೊಗರಿಯನ್ನು ಬಿತ್ತುವ ಗುರಿ ನಿಗದಿಯಾಗಿದೆ.
ಮೂಲಗಳ ಪ್ರಕಾರ ೨೩೮೮೦ ಹೆಕ್ಟರ್ ಜಮೀನಿನಲ್ಲಿ ಮೆಕ್ಕೆಜೋಳ ೫೧೦೦ ಹೆಕ್ಟರ್ ಹೆಸರು ೩೩೫೦ ಶೇಂಗಾ ೩೫೫ ಹೆಕ್ಟರ್ ಸೂರ್ಯಕಾಂತಿ೧೧೫೦ ಹೆಕ್ಟರ್ ಹತ್ತಿ ೧೨೦ ಹೆಕ್ಟರ್ ತೊಗರಿ ಬೆಳೆಯುವ ಗುರಿಯನ್ನು ಹೊಂದಲಾಗಿದೆ.


ಈಗ ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಮತ್ತು ತೊಗರಿ ಬಿತ್ತನೆ ಬೀಜ ಪಡೆಯಲು ಮುಗಿಬಿದ್ದಿದ್ದಾರೆ.
ಈ ಕುರಿತಂತೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ್ ಮಾಹಿತಿ ನೀಡಿ ಈಗ ರೈತ ಸಂಪರ್ಕ ಕೇಂದ್ರದಲ್ಲಿ ೪೦ ಕ್ವಿಂಟಲ್ ಹೆಸರು ಮತ್ತು ೩೦ ಕ್ವಿಂಟಲ್ ತೊಗರಿ ಬೀಜ ದಾಸ್ತಾನು ಇದೆ ಸರ್ಕಾರದ ಸಹಾಯಧನದಲ್ಲಿ ರೈತರು ಇದನ್ನು ಪಡೆಯಬಹುದಾಗಿದೆ ಎಂದರು.


ಒಟ್ಟು ಬಿತ್ತನೆ ಕ್ಷೇತ್ರವಾದ ೩೪,೮೬೫ ಹೆಕ್ಟರ್ ಬಿತ್ತನೆ ಕ್ಷೇತ್ರಗಳಲ್ಲಿ ಕೊನೆಯ ಘಳಿಗೆಯಲ್ಲಿ ರೈತರು ಮೆಕ್ಕೆಜೋಳದ ಬದಲು ಶೇಂಗಾ ಅಥವಾ ಹತ್ತಿ ಬೆಳೆಯನ್ನು ಬಿತ್ತನೆ ಕ್ಷೇತ್ರವನ್ನಾಗಿ ಮಾರ್ಪಡಿಸುವ ಸಾಧ್ಯತೆ ಇದೆ ಏಕೆಂದರೆ ಕಳೆದ ಬಾರಿ ಮೆಕ್ಕೆಜೋಳದ ರೈತರು ಅನೇಕ ಸಂಕಷ್ಟಗಳನ್ನು ಎದುರಿಸಿದ್ದಲ್ಲದೆ ಬೆಲೆ ಕುಸಿತದಿಂದ ಕಂಗೆಟ್ಟು ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದನ್ನು ಸ್ಮರಿಸಬಹುದು.