
ಸೈದಾಪುರ:ಮಾ.೩೦:ಪಟ್ಟಣದ ಎಸ್‌ಜಿಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ೭೭ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಆನ್‌ಲೈನ್ ರಾಷ್ಟ್ರೀಯ ಗೀತೆಯ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರ ವಿದ್ಯಾ ಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಅಮೆರಿಕದ ಸೈಬರ್ ಬುಕ್ ಟೆಕ್ನಾಲಜಿ ಇಂಕ್. ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸೈಬರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವವನ್ನು ಪಡೆದಿದೆ. ಯಾದಗಿರಿ ಜಿಲ್ಲೆಯನ್ನು ಪ್ರತಿನಿಧಿಸಿದ ಈ ಶಾಲೆ, ದೇಶದಾದ್ಯಂತ ಭಾಗವಹಿಸಿದ ೩೦೩ ಸಂಸ್ಥೆಗಳಲ್ಲೊAದ್ದಾಗಿದ್ದೂ ಕರ್ನಾಟಕದ ೨೫ ಶಾಲೆಗಳ ಪೈಕಿ ಪ್ರಮುಖ ಸ್ಥಾನ ಪಡೆದಿದೆ. ವಿಶೇಷವಾಗಿ, ಯಾದಗಿರಿ ಜಿಲ್ಲೆಯಿಂದ ಉತ್ತಮ ಸಾಧನೆ ಮಾಡಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಕೊಚ್ಚಿ ಮತ್ತು ಬೆಂಗಳೂರಿನ ಸ್ಟ್ರಾಟ್ಬಿಸ್ ವೆಂಚರ್ ಸಂಸ್ಥೆ ಆಯೋಜಿಸಿದ್ದು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಏಕತೆಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.
ಸಂಸ್ಥೆಯ ನಿರ್ವಹಣಾಧಿಕಾರಿ ಪರಮೇಶ್ವರಪ್ಪ ವಾರದ್, ಆಡಳಿತಾಧಿಕಾರಿ, ಪಂಡಿತ್ ರಾವ್, ಮುಖ್ಯ ಶಿಕ್ಷಕ ಅಜ್ಮಲ್ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದ ಶಿಕ್ಷಕರಾದ ರಾಜೇಶ್ವರಿ, ಜ್ಯೋತಿ, ಪ್ರವಲ್ಲಿಕಾ, ಭೀಮಯ್ಯ, ಪ್ರಕಾಶ್, ಮೇಘಾ, ಲಿಜಾ, ಆಶಾ, ಮಾಲಾಶ್ರೀ ಮತ್ತು ದೇವಮ್ಮ ಸಂಯೋಜನಾ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.
ನಮ್ಮ ಶಾಲೆಯ ೧೨೪ ವಿದ್ಯಾರ್ಥಿಗಳು ಈ ವಿಶ್ವದಾಖಲೆಗೆ ಅರ್ಹರಾಗಿದ್ದಾರೆ. ವಿದ್ಯಾರ್ಥಿಗಳ ಪ್ರಮಾಣಪತ್ರಗಳು ರಾಷ್ಟ್ರ ವಿದ್ಯಾ ಗೀತ್ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಈ ಸಾಧನೆ ಶಾಲೆಗೆ ಮಾತ್ರವಲ್ಲ. ಯಾದಗಿರಿ ಜಿಲ್ಲೆಗೆ ಹೆಮ್ಮೆ ತಂದಿದೆ. ಇದಕ್ಕೆ ಸಿಬ್ಬಂದಿ ವರ್ಗದವರ ಪ್ರಯತ್ನವೇ ಕಾರಣವಾಗಿದೆ. ಇದರಿಂದ ಸಂಸ್ಥೆಯ ಮಹತ್ವ ಹೆಚ್ಚಾದಂತಾಗಿದೆ.
ಪರಮೇಶ್ವರಪ್ಪ ವಾರದ ನಿರ್ವಹಣಾಧಿಕಾರಿ ಎಸ್‌ಜಿಎಸ್ ಶಾಲೆ ಸೈದಾಪುರ.






















