
ನವಲಗುಂದ,ಮಾ14: ಪಟ್ಟಣದಲ್ಲಿರುವ ಶ್ರೀ ಶಂಕರ ಮಹಾವಿದ್ಯಾಲಯದ ಬಿ.ಎ 6 ನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರವೀಣ್ ಪೂಜಾರ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಪುರುಷರ ಖೋ-ಖೋ ತಂಡದ ಆಯ್ಕೆಯಲ್ಲಿ ಭಾಗವಹಿಸಿ, ಸತತವಾಗಿ ಮೂರನೇ ಬಾರಿಗೆ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.
ಈ ವಿದ್ಯಾರ್ಥಿ ಮಾರ್ಚ 26 ರಿಂದ 29ರ ವರೆಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಜರುಗಲಿರುವ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಲಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ಎಸ್.ವಿ. ಬಡಿಗೇರ, ದೈಹಿಕ ಶಿಕ್ಷಣ ನಿರ್ದೇಶಕ ಎ.ಜಿ.ಜಕ್ಕನಗೌಡ್ರ ಹಾಗೂ ಎಲ್ಲ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.






















