Home ಜಿಲ್ಲೆ ವಿಜ್ಞಾನ ವಿಕಾಸದ ಸಾಧನ

ವಿಜ್ಞಾನ ವಿಕಾಸದ ಸಾಧನ

ಸೈದಾಪುರ:ಮಾ.1: ಆಧುನಿಕ ಜಗತ್ತಿನಲ್ಲಿ ವಿಜ್ಞಾನವು ವಿಕಾಸದ ಸಾಧನವಾಗಿದೆ. ನಾವು ಅದನ್ನು ನಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಹೊರೆತು ವಿನಾಶಕ್ಕಲ್ಲ ಎಂದು ವಿಜ್ಞಾನ ಶಿಕ್ಷಕಿ ಮಹೇಶ್ವರಿ ಯಲ್ಲಪ್ಪ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜೀವನವನ್ನು ರೂಪಿಸುವಲ್ಲಿ ಹಾಗೂ ಎದುರಾಗುವ ಸಂಕಿರ್ಣ ಸವಾಲುಗಳನ್ನು ಪರಿಹರಿಸುವಲ್ಲಿ ವಿಜ್ಞಾನ ಅಪರಿಮಿತವಾದ ಸಾಮರ್ಥ್ಯವನ್ನು ಹೊಂದಿದೆ. ಜಗತ್ತನ್ನು ಬದಲಾಯಿಸುವ ಏಕೈಕ ಅಸ್ತç ಅದು ವಿಜ್ಞಾನ. ಆದ್ದರಿಂದ ಅದನ್ನು ನಾವು ಜನಸಾಮಾನ್ಯರ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಮತ್ತೊಬ್ಬರ ವಿನಾಶಕ್ಕಲ್ಲ ಎಂದರು.
ಇದಕ್ಕೂ ಮೊದಲು ವಿಜ್ಞಾನ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿಯಿAದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು ವಿಜ್ಞಾನದ ಹಲವು ಮಾದರಿಗಳನ್ನು ಸಿದ್ದಪಡಿಸಿ ಅವುಗಳ ಬಗ್ಗೆ ವಿವರಣೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಆಸೀಫಾ, ಸ್ವಾತಿ, ಮಾಹಲಕ್ಷಿö್ಮÃ, ಶ್ರೀದೇವಿ, ಸನ್ಹಾ, ನರಸಮ್ಮ, ಮಹೇಶ ಸೇರಿದಂತೆ ಇತರರಿದ್ದರು.