Home ಜಿಲ್ಲೆ ಶಾಲೆ ಪುನರುಜ್ಜೀವನ

ಶಾಲೆ ಪುನರುಜ್ಜೀವನ

ಹುಬ್ಬಳ್ಳಿ, ಏ9: ಹುಬ್ಬಳ್ಳಿಯ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಜೆಸಿಇಟಿ) ಸಂಸ್ಥೆಯ ಎನ್‍ಎಸ್ಸೆಸ್ ವಿದ್ಯಾರ್ಥಿಗಳು ಬಿಎನ್‍ಎಸ್‍ಕೆ 659 ಚಟುವಟಿಕೆಯಡಿ ಉಣಕಲ್ ಪ್ರದೇಶದ ಕೊಕಟೆ ಹಾಗೂ ಐ.ಜಿ. ಹಿರೇಗೌಡರ್ ಸರಕಾರಿ ಶಾಲೆ ಹಾಗೂ ಕಾಲೇಜಿನ ಪುನರುಜ್ಜೀವನ ಕಾರ್ಯವನ್ನು ನಡೆಸಿದರು.

ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಬಣಕಾರ್ ಚಾಲನೆ ನೀಡಿದರು. ವಿಭಾಗದ ಮುಖ್ಯಸ್ಥರು, ಐ.ಜಿ. ಹಿರೇಗೌಡರ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಾನಂದ ಹೆಬಸೂರ್, ಶಿವಣ್ಣ ಹಂಗರಕಿ, ಕೊಕಟೆ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ್ ಹಾಗೂ ಸಿಬ್ಬಂದಿ ಸದಸ್ಯರು ಉಪಸ್ಥಿತರಿದ್ದರು.