Home ಜಿಲ್ಲೆ ಕಲಬುರಗಿ ಎಸ್‍ಬಿಐ ವತಿಯಿಂದ ಸ್ಮಾರ್ಟ್ ಅಗ್ರಿ ಕಸ್ಟಮರ್ ಮೀಟ್ರೈತರಿಗೆ ಸಾಲ ಸೌಲಭ್ಯಗಳ ಮಾಹಿತಿ, ಉದ್ಯಮಿ ರೈತರಿಗೆ ಚೆಕ್...

ಎಸ್‍ಬಿಐ ವತಿಯಿಂದ ಸ್ಮಾರ್ಟ್ ಅಗ್ರಿ ಕಸ್ಟಮರ್ ಮೀಟ್ರೈತರಿಗೆ ಸಾಲ ಸೌಲಭ್ಯಗಳ ಮಾಹಿತಿ, ಉದ್ಯಮಿ ರೈತರಿಗೆ ಚೆಕ್ ವಿತರಣೆ

ಕಲಬುರಗಿ, ಜೂ. 21: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಆಡಳಿತ ಕಚೇರಿ ಕಲಬುರಗಿ ವತಿಯಿಂದ ನಗರದ ಖೈರಾದ್ ಹೋಟೆಲ್‍ನ ಗೋಲ್ಡ್ ಹಬ್ ಸಭಾಂಗಣದಲ್ಲಿ ಸ್ಮಾರ್ಟ್ ಅಗ್ರಿ ಕಸ್ಟಮರ್ ಮೀಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಎಸ್‍ಬಿಐನ ಗ್ರಾಹಕ ರೈತರು ಹಾಗೂ ಕೃಷಿ ಉದ್ಯಮಿಗಳಾದ ರೈತರು ಭಾಗವಹಿಸಿದ್ದರು. ರೈತರ ಅಭಿವೃದ್ಧಿಗೆ ಬ್ಯಾಂಕ್ ವತಿಯಿಂದ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳು, ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮಗಳಿಗೆ ನೀಡಲಾಗುವ ಆರ್ಥಿಕ ನೆರವು ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉದ್ಯಮಶೀಲರಾಗಬೇಕು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು, ಅದಕ್ಕೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಎಸ್‍ಬಿಐ ಒದಗಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಹಾಗೂ ವಿವಿಧ ಉದ್ಯಮಗಳಲ್ಲಿ ತೊಡಗಿರುವ ಕೆಲ ರೈತ ಉದ್ಯಮಿಗಳಿಗೆ ಸಾಲ ಮಂಜೂರಾತಿ ಚೆಕ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‍ಬಿಐ ಉಪ ಮಹಾಪ್ರಬಂದಕರು ಕೃಷ್ಣಕುಮಾರ್ ಪ್ರಭು, , ಪ್ರಾದೇಶಿಕ ವ್ಯವಸ್ಥಾಪಕ ಅನಿಲ್ ಬಿಹಾರಿ, ಮುಖ್ಯ ವ್ಯವಸ್ಥಾಪಕ ಗೌರವ್ ಗುಪ್ತ, ಸಂಬಂಧಿ ವ್ಯವಸ್ಥಾಪಕ ಗೋರಕನಾಥ್ ಪಾಟೀಲ್ ಸೇರಿದಂತೆ ಬ್ಯಾಂಕಿನ ಇತರೆ ಅಧಿಕಾರಿಗಳು ಹಾಗೂ ಕೃಷಿ ಉದ್ಯಮಶೀಲ ರೈತರು ಉಪಸ್ಥಿತರಿದ್ದರು.