Home ಜಿಲ್ಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಸಮಗ್ರ ವೀರಾಗ್ರಣಿ ಪ್ರಶಸ್ತಿ

ಲಕ್ಷೆ÷್ಮÃಶ್ವರ, ಸೆ೧೮: ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಪಂದ್ಯಾ ವಳಿಯಲ್ಲಿ ಬಾಲಕರವಿಭಾಗದಲ್ಲಿ ವಾಲಿಬಾಲ್ ನಲ್ಲಿ, ೪೦೦೪ ಮಿ ರಿಲೆಯಲ್ಲಿ,೧೦೦೪ ಮೀ ರೀಲೆಯಲ್ಲಿ ಪ್ರಥಮ, ಸ್ಥಾನ ಪಡೆದು ಶಾಲೆಯು ವೀರಾಗ್ರಣಿ ಪಟ್ಟವನ್ನು ಅಲಂಕರಿಸಿದೆ. ಕು.ಉಂಡಿ ಈತನು ೧೦೦ ಮೀಟರ್ ೨೦೦ ಮೀ ಹಾಗೂ ಎತ್ತರ ಜಿಗಿದ್ದಲ್ಲಿ ಪ್ರಥಮ ಸ್ಥಾನ ಪಡೆದು ವಯಕ್ತಿಕ ವಿರಾಗ್ರ ಣಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾನೆ.


ಸರಪಳಿ ಗುಂಡು ಎಸೆತದಲ್ಲಿ, ಚಕ್ರಸೆತದಲ್ಲಿ, ಕುಮಾರ್ ಅಜಾದ್ ಸೂರಣಗಿ ಪ್ರಥಮ ಸ್ಥಾನವನ್ನು , ಅಡೆತಡೆ ಓಟದಲ್ಲಿ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು, ಅಡೆತಡೆ ಓಟದಲ್ಲಿ, ಹಾಗೂ ಜಿಗಿತದಲ್ಲಿ ಕು. ಫಯಾಜ್ ನದಾಫ್ ಪ್ರಥಮ, ಬಚ್ಚಿ ಎಸೆತಲ್ಲಿ ಶಿವರಾಜ್ ವಾಲಿಕರ್ ಪ್ರಥಮ,೩೦೦೦ ಮೀ ಓಟದಲ್ಲಿ ವಿವೇಕ್ ಬಾರ್ಕಿ ಪ್ರಥಮ, ೪೦೦ಮೀ ಓಟದಲ್ಲಿ ಮನೋಜ್ ಹೊನ್ನಿಕೊಪ್ಪ ಪ್ರಥಮ ಸ್ಥಾನವನ್ನು ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


. ಇನ್ನೂ ಬಾಲಕಿಯರ ವಿಭಾಗದಲ್ಲಿ ಖೋ ಖೋ, ೪೧೦೦ಮೀ, ೪೪೦೦ಮೀ, ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲಾ ವಿರಾಗ್ರಣಿ ಪಡೆದುಕೊಂಡಿದ್ದಾರೆ. ಇನ್ನೂ ವೈಯಕ್ತಿಕ ವಿಭಾಗದಲ್ಲಿ ೮೦೦ಮೀ, ೧೫೦೦ಮೀ. ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಕಲ್ಪನಾ ಲಮಾಣಿ ಪಡೆದು ವೀರಗಣಿ ಪ್ರಶಸ್ತಿಯನ್ನು ಪಡೆದಿದ್ದಾಳೆ,೨೦೦ಮೀ, ೪೦೦ಮೀ ಎತ್ತರ ಜಿಗಿತ ದಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಸರಸ್ವತಿ ಲಮಾಣಿ, ಸರಪಳಿ ಗುಂಡು ಎಸೆದಲ್ಲಿ ಕುಮಾರಿ ರೇಣುಕಾ ಹುಳ್ಳಿಕೊಪ್ಪಿ ಪ್ರಥಮ, ಚಕ್ರ ಎಸೆತದಲ್ಲಿ ಸುಮಯ್ಯ ಮತ್ತೂರ್ ಪ್ರಥಮ,೪೦೦ಮೀ ತೋಟದಲ್ಲಿ ಗಂಗವ್ವ ಕೊಪ್ಪಳ ಪ್ರಥಮ,೧೦೦ಮೀ, ಉದ್ದ ಜಿಗಿತದಲ್ಲಿ ವರ್ಷಾ.ಮಟ್ಟಿ ಪ್ರಥಮ, ಅಡೆತಡೆ ಓಟದಲ್ಲಿ ಅಪ್ಸಾನ ನದಾಫ್ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರೆಲ್ಲಾ ಸಾಧನೆಗೆ ಗ್ರಾಮಭಾರತಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ಚೇರ್ಮನ್‌ರಾದ ಎಸ್. ಪಿ ಬಳಿಗಾರ, ಗೌರವ ಕಾರ್ಯದರ್ಶಿಗಳಾದ ಸಿ.ಎಂ ರಾಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಶಿಕ್ಷಕರು ಅಭಿನಂದಿಸಿದ್ದಾರೆ.