Home Lead News ಪ್ರತಿ ಲೀಟರ್ ಹಾಲಿನ ಬೆಲೆ 8 ರೂ. ಹೆಚ್ಚಳ: ನ.1ರಿಂದ ಪರಿಷ್ಕೃತ ದರ ಜಾರಿ

ಪ್ರತಿ ಲೀಟರ್ ಹಾಲಿನ ಬೆಲೆ 8 ರೂ. ಹೆಚ್ಚಳ: ನ.1ರಿಂದ ಪರಿಷ್ಕೃತ ದರ ಜಾರಿ

ಬೆಂಗಳೂರು, .ಅ.29- ಈಗಾಗಲೇ ಅಗತ್ಯ ವಸ್ತುಗಳ ಸರ ಗಗನಕ್ಕೇರಿರುವ‌‌ ಹೊತ್ತಲ್ಲೇ ಪ್ರತಿ ಲೀಟರ್ ನಂದಿನಿ ಹಾಲಿ ದರವನ್ನು ಎಂಟು ರೂ.ಗಳಿಗೆ ಹೆಚ್ಚಿಸುವ ಮೂಲಕ ರಾಜ್ಯದ ಜನರ ಜೇಬಿಗೆ ರಾಜ್ಯ ಸರ್ಕಾರ ಇನ್ನಷ್ಟು ಕತ್ತರಿ ಹಾಕಿದೆ


ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಿಷ್ಕೃತ ಹಾಲಿನ ದರ ನವೆಂಬರ್ ಒಂದರಿಂದಲೇ ಜಾರಿಗೆ ಬರಲಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಸರ್ಕಾರ ದೊಡ್ಡ ಆಘಾತ ನೀಡಿದೆ.


ಸಂಪುಟ ಸಭೆಯ ಬಳಿಕ‌ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗೆ ಏರಿಸಬೇಕೆಂದು ಹಾಲು ಒಕ್ಕೂಟಗಳು‌ ಮನವಿ ಮಾಡಿದ್ದರು . ಆದರೆ ಈ ದರದಲ್ಲಿ 7 ರೂ ಗಳನ್ನು ನೀಡುತ್ತೇವೆ. ಇನ್ನುಳಿದ ಒಂದು ರೂಪಾಯಿಗಳನ್ನು ಒಕ್ಕೂಟಕ್ಕೆ, ನೀಡುತ್ತೇವೆ ಎಂದರು.


ರಾಜ್ಯದಲ್ಲಿ ತೀವ್ರ ಬರ ಇದೆ, 228 ತಾಲ್ಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹೊಸಿ ಕಬ್ಬು ಬೆಳೆಗಾರರು ಅಂತನೂ ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಹೈನುಗಾರಿಕೆಯನ್ನೇ ನಂಬಿ ಹಲವು ರೈತರು ಬದುಕುತ್ತಿದ್ದಾರೆ. ಹಾಲು ಉತ್ಪಾದನೆ ಮಾಡಿ ಅದರ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಕೃಷಿ ವಲಯದಲ್ಲಿ ನಿಶ್ಚಿತತೆ ಇಲ್ಲ, ಹಾಲು ಉತ್ಪಾದನೆಯ ಆದಾಯ ಸದ್ಯಕ್ಕೆ ಅವರಿಗೆ ಖಾತ್ರಿ ಎಂದು ಹೇಳಿದರು.


ಈ ಹಿಂದೆ ರೈತರು ಹೋರಾಟ ಮಾಡಿ ಹಾಲಿನ ದರ ಪರಿಷ್ಕರಣೆಗೆ ಆಗ್ರಹಿಸಿದ್ದರು. ಹಾಲು ಉತ್ಪಾದನಾ ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸಲು ಒತ್ತಾಯ ಮಾಡಿದ್ದವು.


ಹಾಲಿನ ದರ ಏರಿಸಲು ಪಕ್ಷಾತೀತವಾಗಿ ಒತ್ತಡ ಇದೆ. ರಾಜ್ಯದಲ್ಲಿ 46 ರೂ., ದೆಹಲಿಯಲ್ಲಿ 59 ರೂ., ಗುಜರಾತ್‌ನಲ್ಲಿ 57 ರೂ., ತೆಲಂಗಾಣ 64 ರೂ. ಇದೆ. ಸರಾಸರಿ ಭಾರತದಲ್ಲಿ 57 ರೂ ಹಾಲಿನ ದರ ಇದೆ. ನಮ್ಮ ರಾಜ್ಯದಲ್ಲಿ ಸರಾಸರಿ ದರ 46 ರೂ ಇದೆ ಎಂದು ಅಂಕಿ ಅಂಶ ನೀಡಿದರು.


ಈ ಎಲ್ಲ ಕಾರಣಗಳಿಂದ ರೈತರ ನೆರವಿಗಾಗಿ ಹಾಲಿನ ದರ ಏರಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಹಾಲಿನ ದರ 8 ರೂ. ಹೆಚ್ಚಳ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಇದರಲ್ಲಿ 1 ರೂ. ಹಾಲು ಒಕ್ಕೂಟಗಳಿಗೆ, ರೈತರಿಗೆ 7 ರೂ. ಹೋಗಲಿದೆ.


ಇದು ಸರ್ವಾನುಮತದಿಂದ ಕೈಗೊಂಡ ತೀರ್ಮಾನ ಆಗಿದೆ. ಇನ್ಮುಂದೆ ರೈತರಿಗೆ 35 ರೂ. ಬದಲು 42 ರೂ. ಲೀಟರ್‌ಗೆ ಸಿಗಲಿದೆ. ಇದರ ಜೊತೆಗೆ ಪ್ರೋತ್ಸಾಹ ಧನ 5 ರೂ. ಸಿಗುತ್ತಿದೆ. ಒಟ್ಟು 47 ರೂ. ಲೀಟರ್ ಹಾಲಿಗೆ ಇನ್ಮುಂದೆ ರೈತರಿಗೆ ಸಿಗಲಿದೆ ಎಂದು ವಿವರಿಸಿದರು.