Home ಜಿಲ್ಲೆ ಕೆಲಸದ ಅವಧಿ ಬದಲಾವಣೆ ಮಾಡಲು ಮನವಿ

ಕೆಲಸದ ಅವಧಿ ಬದಲಾವಣೆ ಮಾಡಲು ಮನವಿ

ಗುರುಮಠಕಲ್:ಮಾ.೧೪:ಬೇಸಿಗೆ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಎಲ್ಲಾ ಇಲಾಖೆಗಳ ಕಚೇರಿ ಕೆಲಸದ ಅವಧಿ ಬದಲಾವಣೆ ಮಾಡುವ ಬಗ್ಗೆ, ಜಿಲ್ಲಾಧಿಕಾರಿಗಳು ಯಾದಗಿರಿ ಅವರಿಗೆ ಚನ್ನಮಲ್ಲಪ್ಪ ಘಂಟಿ ತಹಸಿಲ್ದಾರರು ಗುರುಮಠಕಲ್ ಇವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು,
ಈ ಒಂದು ಸಂದರ್ಭದಲ್ಲಿ ಡಾ|| ಶಶಿಕಿರಣ್ ಹಜಾರೆ ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರು, ಪಂಚಾಯತಿ ಇಲಾಖೆಯ ಸಾಂಖ್ಯಿಕ ಅಧಿಕಾರಿಗಳು ಮತ್ತು ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಸಜ್ಜನ್, ತಾಲೂಕು ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ನೌಕರರ ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಬಡಿಗೇರ್, ಉಪ ತಹಸಿಲ್ದಾರರಾದ ನರಸಿಂಹ ಸ್ವಾಮಿ,ಐಟಿಐ ಕಾಲೇಜಿನ ಉಪನ್ಯಾಸಕರಾದ ವೆಂಕಟರಾಮುಲು ಹಂದರಿಕಿ , ಜುಲ್ಫಿಕಾರ್ ಅಲಿ ನಾಗಿ ರೆಡ್ಡಿ, ಚಂದ್ರಶೇಖರ್, ಆರೋಗ್ಯ ಇಲಾಖೆ, ಪಂಚಾಯತ್ ರಾ???ಲಾಖೆ , ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಮತ್ತು ವಿವಿಧ ಇಲಾಖೆಯ ನೌಕರರು ಬಂಧುಗಳು ಅಧಿಕಾರಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.