Home Lead News ರಾಜ್ಯ ರಸ್ತೆ ಸಾರಿಗೆ ನೌಕರರ ಸಂಪು

ರಾಜ್ಯ ರಸ್ತೆ ಸಾರಿಗೆ ನೌಕರರ ಸಂಪು

ಬೆಂಗಳೂರು. ಮೇ ೨- ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಇದೇ ತಿಂಗಳ ೨೦ರಿಂದ ಅನಿದಿಷ್ಟ ಅವಧಿ ಮುಷ್ಕರ ನಡೆಸಲಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮದ ನೌಕರರು ಈ ತಿಂಗಳ ೨೦ ರಿಂದ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲಿದ್ದಾರೆ ಎಂದು ಸಾರಿಗೆ ನೌಕರರ ಸಂಘ ಘೋಷಿಸಿದ್ದು ಮೇ ೨೦ರಿಂದ ರಾಜ್ಯಾದ್ಯಂತ ಸಾರಿಗೆ ಬಸ್‌ಗಳ ಓಡಾಟದಲ್ಲಿ ವ್ಯತ್ಯಾಯವಾಗುವ ಸಾಧ್ಯತೆಗಳು ಇವೆ.


ಸಾರಿಗೆ ನೌಕರರ ಜಂಟಿ ಕ್ರಿಯ ಸಮಿತಿಯ ಸಂಚಾಲಕ ಜಯದೇವರಾಜ ಅರಸ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿ ನಮ್ಮ ಬೇಡಿಕೆಗಳನ್ನು ಈಡೇರಿಸ ಬೇಕು. ಇಲ್ಲವಾದರೆ ಮುಷ್ಕರ ಎದುರಿಸಬೇಕು ಎಂದು ತಿಳಿಸಿದರು. ೨೦ರ ಬೆಳಗ್ಗೆ ೬ ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ಘೋಷಿಸಿದರು.

ಸುಮಾರು ೧.೨೫ ಲಕ್ಷಕ್ಕೂ ಹೆಚ್ಚು ನೌಕರರು ಈ ಹೋರಾಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಜಂಟಿ ಕ್ರಿಯಾ ಸಮಿತಿ ಹಲವು ಬೇಡಿಕೆಗಳನ್ನು ಮುಂದಿಟ್ಟು, ಸರ್ಕಾರದೊಂದಿಗೆ ನಡೆದಿರುವ ೧೨ ಸುತ್ತಿನ ಮಾತುಕತೆಗಳು ಫಲಕಾರಿಯಾಗಿಲ್ಲ ಎಂದು ಆರೋಪಿಸಿದೆ. ಸರ್ಕಾರ ೩೮ ತಿಂಗಳ ಹಿಂಬಾಕಿ ವೇತನದ ಬದಲು ೨೬ ತಿಂಗಳಷ್ಟನ್ನು ನೀಡಲು ಸಿದ್ಧವಿದ್ದರೂ, ಇದನ್ನು ನೌಕರರು ತಿರಸ್ಕರಿಸಿದ್ದಾರೆ. ಉಳಿದ ೧೨ ತಿಂಗಳ ಬಾಕಿಯನ್ನೂ ಸೇರಿಸಿ ಸಂಪೂರ್ಣ ಮೊತ್ತವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.


ನೌಕರರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, “ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ” ಎಂದಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳು:
೩೮ ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು
೨೦೨೪ ಜನವರಿ ೧ರಿಂದ ಮೂಲ ವೇತನಕ್ಕೆ ೨೫% ಹೆಚ್ಚಳ
೩೧% ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು
ಬಾಟಾ ಹಾಗೂ ಇತರೆ ಭತ್ಯೆಗಳ ಹೆಚ್ಚಳ
ಕೋವಿಡ್ ಅವಧಿಯ ಅರಿಯರ್ಸ್ ಪಾವತಿ
೨೬ ತಿಂಗಳ ಬಾಕಿ ೧೨೭೨ ಕೋಟಿ ಒಂದೇ ಕಂತಿನಲ್ಲಿ ಬಿಡುಗಡೆಗೆ ಒತ್ತಾಯ.

ಜನರಿಗೆ ಏನು ಪರಿಣಾಮ?
ಮುಷ್ಕರ ಜಾರಿಗೆ ಬಂದರೆ, ಏSಖಖಿಅ, ಃಒಖಿಅ ಸೇರಿದಂತೆ ಎಲ್ಲಾ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಪರ್ಯಾಯ ವ್ಯವಸ್ಥೆ ಹುಡುಕಬೇಕಾಗಬಹುದು.


ಸರ್ಕಾರ ಮತ್ತು ನೌಕರರ ನಡುವೆ ಇನ್ನೂ ಮಾತುಕತೆ ಸಾಧ್ಯತೆ ಇರುವುದರಿಂದ, ಅಂತಿಮ ನಿರ್ಧಾರ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.