
ರಬಕವಿ-ಬನಹಟ್ಟಿ,ಮೇ 2: ಕಾರ್ಮಿಕರ ಪರಿಶ್ರಮ, ಹಕ್ಕುಗಳು ಹಾಗೂ ಸಮಾಜದ ಪ್ರಗತಿಯಲ್ಲಿ ಅವರ ಗಣನೀಯ ಕೊಡುಗೆಗಳನ್ನು ಗೌರವಿಸುವ ಗುಣ ನಮ್ಮದಾಗಬೇಕೆಂದು ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ಹೇಳಿದರು.
ಭಾರತ್ ಗ್ಯಾಸ್ ಕಚೇರಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೇ.1ರಂದು ಆಚರಿಸುವ ಕಾರ್ಮಿಕರ ದಿನವನ್ನು ಕಾರ್ಮಿಕರು ಕಷ್ಟಪಟ್ಟು ಮಾಡುವ ಕೆಲಸವನ್ನು ಗೌರವಿಸುವುದಲ್ಲದೇ ನ್ಯಾಯಸಮ್ಮತ ವೇತನ, ಕೆಲಸ ದವಧಿ, ಅವರ ಸುರಕ್ಷತೆ ಮೊದಲಾದ ಕನಿಷ್ಟ ಹಕ್ಕುಗಳನ್ನು ನೀಡುವ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವುದರೊಡನೆ ಸಮಾಜದ ಸರ್ವ ವಿಧದ ಪ್ರಗತಿಯಲ್ಲಿ ಅವರ ಮಹತ್ತರ ಪಾತ್ರವನ್ನು ಸ್ಮರಿಸುವ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಪ್ರಭು ಮಳಗಲಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಅಥಣಿ, ಕಾಡು ದೊಡ್ಡಪ್ಪಗೋಳ, ಮಂಜು ದೊಡ್ಡಪ್ಪಗೋಳ ಇವರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಜಯಕುಮಾರ ಹಲಕುರ್ಕಿ, ಎಂ.ಎಸ್.ಗಡೆನ್ನವರ, ಸಂಗಮೇಶ ಗುಣಕಿ ಹಾಗೂ ಭಾರತ್ ಗ್ಯಾಸ್ ಸಂಸ್ಥೆಯ ಸಿಬ್ಬಂದಿಗಳಿದ್ದರು.






















