Home ಜಿಲ್ಲೆ ಸತ್ತೂರಿನಲ್ಲಿ ನರಸಿಂಹ ಸ್ತುತಿ ಉಪನ್ಯಾಸ

ಸತ್ತೂರಿನಲ್ಲಿ ನರಸಿಂಹ ಸ್ತುತಿ ಉಪನ್ಯಾಸ

ಸತ್ತೂರು,ಮೇ2: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ಶ್ರೀ ವಿಶ್ವನಾಥ ಕಾಂಗೋ ಇವರ ನಿವಾಸದಲ್ಲಿ ಬರುವ ಭಾನುವಾರ ದಿ. 3-5-2026 ರಂದು ಬೆಳಿಗ್ಗೆ 8:15 ರಿಂದ 9:15 ರ ವರೆಗೆ ನರಸಿಂಹ ಜಯಂತಿಯ ಪ್ರಯುಕ್ತ “ನರಸಿಂಹ ಸ್ತುತಿ” ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಪಂ. ಮುರಳಿಧರಾಚಾರ್ಯ ಮಳಗಿಯವರು ಆಗಮಿಸಲಿದ್ದಾರೆ. ಉಪನ್ಯಾಸದ ಮೊದಲು ಬೆಳಿಗ್ಗೆ 7:15 ರಿಂದ 8 :15 ರ ವರೆಗೆ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಲಿದೆ ಎಂದು ಬಳಗದ ಕಾರ್ಯದರ್ಶಿಯಾದ ಅವಧಾನಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 63 61 83 57 10 ಸಂಪರ್ಕಿಸಲು ಕೋರಿಕೆ.