Home ಜಿಲ್ಲೆ ಏ.4 ರಂದು ರಾಜಗುರು ಸ್ಮøತಿ ಸಂಗೀತೋತ್ಸವ ಕಾರ್ಯಕ್ರಮ

ಏ.4 ರಂದು ರಾಜಗುರು ಸ್ಮøತಿ ಸಂಗೀತೋತ್ಸವ ಕಾರ್ಯಕ್ರಮ

ಧಾರವಾಡ, ಏ.2: ಹಿಂದೂಸ್ತಾನಿ ಸಂಗೀತ ದಿಗ್ಗಜ ಪದ್ಮಭೂಷಣ ಪಂ. ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ ರಾಜಗುರು ಸ್ಮøತಿ ಸಂಸ್ಥೆಯು ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಎಪ್ರಿಲ್ 4 ರಂದು ಸಂಜೆ 6 ಗಂಟೆಗೆ ಸ್ಮøತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಭಾರತಿದೇವಿ ರಾಜಗುರು ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಖ್ಯಾತ ಸಾಂಸ್ಕøತಿಕ ಸಂಘಟಕ ನಿಜಗುಣ ರಾಜಗುರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಹಿರಿಯ ಗಾಯಕ ಪಂ. ಪರಮೇಶ್ವರ ಹೆಗಡೆ ಅವರು ಅಧ್ಯಕ್ಷತೆ ವಹಿಸುವರು.


ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಅನುರಾಧಾ ಕುಬೇರ ಅವರ ಗಾಯನ ಹಾಗೂ ಮೊಹಸಿನ್ ಖಾನರ ಸಿತಾರ ವಾದನ ನಡೆಯಲಿದೆ. ಸಹ ಕಲಾವಿದರರಾಗಿ ತಬಲಾದಲ್ಲಿ ಸುಮಿತ್ ನಾಯಕ ಹಾಗೂ ರೂಪಕ ಕಲ್ಲೂರಕರ, ಹಾರ್ಮೋನಿಯಂನಲ್ಲಿ ಸೌಮಿತ್ರಾ ಕ್ಷೀರಸಾಗರ ಸಹಕಾರ ನೀಡಲಿದ್ದಾರೆ.


ಬೆಂಗಳೂರಿನಲ್ಲಿ ನೆಲೆಸಿರುವ ಪಂ. ರಾಜಗುರು ಅವರ ಶಿಷ್ಯರು ಪ್ರಸಿದ್ಧ ಗಾಯಕರು ಆಗಿರುವ ಪಂ. ಪರಮೇಶ್ವರ ಹೆಗಡೆಯವರು ಕಳೆದ 32 ವರ್ಷಗಳಿಂದ ರಾಜಗುರು ಸ್ಮøತಿ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡುತ್ತಾ ಇದ್ದು. ತಮ್ಮ ಗುರುಗಳ ಸ್ಮರಣೆಯಲ್ಲಿ ಸಂಗೀತ ಸಮಾರೋಹವನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.