Home ಜಿಲ್ಲೆ ಕಲಬುರಗಿ ಆಡಂಬರಕ್ಕೆ ಬ್ರೇಕ್, ಶಿಕ್ಷಣಕ್ಕೆ ಬೆಂಬಲ

ಆಡಂಬರಕ್ಕೆ ಬ್ರೇಕ್, ಶಿಕ್ಷಣಕ್ಕೆ ಬೆಂಬಲ

ಕರಜಗಿ :ಜು.7:ಅಫಜಲಪುರ ತಾಲೂಕಿನ ಉಡಚಾಣ ಗ್ರಾಮದಲ್ಲಿ ಗಿರೀಶ್ ಶರಣು ಪಡಶೆಟ್ಟಿ ಅವರ ಜನ್ಮದಿನ ಅಂಗವಾಗಿ 5 ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.ಜನ್ಮದಿನ ಎಂದರೆ ಕೇವಲ ಕೇಕ್ ಕತ್ತರಿಸಿ,ದುಬಾರಿ ಪಾರ್ಟಿ ಮಾಡುವುದಷ್ಟೇ ಅಲ್ಲ,ಸಮಾಜಕ್ಕೆ ಕೈಲಾದ ಸಹಾಯ ಮಾಡುವುದು ಎಂಬುದನ್ನು ತಾಪಂ ಮಾಜಿ ಅಧ್ಯಕ್ಷ ಗುರುಣ್ಣ ಪಡಶೆಟ್ಟಿ ಹಾಗೂ ಶರಣು ಪಡಶೆಟ್ಟಿ ಅವರು ಸಾಬೀತುಪಡಿಸಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಹೇಳಿದರು.ಅಫಜಲಪುರ ತಾಲೂಕಿನ ಉಡಚಾಣ ಗ್ರಾಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಶರಣು ಪಡಶೆಟ್ಟಿ ಪುತ್ರನ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಉಡಚಾಣ, ಶಿವೂರ, ಹಿರಿಯಾಳ ಗ್ರಾಮದ ಶಾಲಾ ಮಕ್ಕಳಿಗೆ 5 ಸಾವಿರ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.ಇಂದಿನ ಯುಗದಲ್ಲಿ ಆಡಂಬರದಿಂದ ಜನ್ಮದಿನ ಆಚರಣೆ ಮಾಡಿಕೊಂಡು ಸಾವಿರಾರು ರೂ.ವ್ಯರ್ಥ ಮಾಡುತ್ತಿರುವ ಕಾಲಘಟ್ಟದಲ್ಲಿ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಸಂಕಲ್ಪವನ್ನು ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಇಂತಹ ಅದ್ಭುತವಾದ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ,”ಇಂದಿನ ದಿನಗಳಲ್ಲಿ ಹುಟ್ಟುಹಬ್ಬವನ್ನು ತೋರ್ಪಡಿಕೆಗಾಗಿ ಆಚರಿಸಿಕೊಳ್ಳುವವರೇ ಹೆಚ್ಚು. ಆದರೆ, ವಿವಿಧ ಶಾಲೆಯ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಉಚಿತ ನೋಟ್ ಬುಕ್ ವಿತರಣೆ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.ಇಂತಹ ಸಮಾಜಮುಖಿ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ” ಎಂದು ಹಾರೈಸಿದರು.

ತಾಪಂ ಮಾಜಿ ಅಧ್ಯಕ್ಷ ಶರಣು ಪಡಶೆಟ್ಟಿ ಮಾತನಾಡಿ,ಮಕ್ಕಳ ಮುಖದಲ್ಲಿನ ನಗು ನನ್ನ ಮಗನ ಜನ್ಮದಿನದ ಅತ್ಯುತ್ತಮ ಉಡುಗೊರೆ.ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಈ ಸಣ್ಣ ಪ್ರಯತ್ನ ಮಾಡಿದ್ದೇನೆ.ಮುಂದಿನ ದಿನಗಳಲ್ಲೂ ಇಂತಹ ಜನಪರ ಕಾರ್ಯಗಳನ್ನು ಮುಂದುವರಿಸಲಾಗುವುದು” ಎಂದು ತಮ್ಮ ಸಂತಸ ಹಂಚಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಬಾಕೆ,ಗುರು ಸಾಲಿಮಠ, ಬಸವರಾಜ ಬೂಶೆಟ್ಟಿ,ಮುರುಘೇಂದ್ರ ಮಸಳಿ, ಮಹಾಂತೇಶ ನೂಲಾ, ಸಂತೋಷ ದಾಮಾ,ಶರಣು ನೂಲಾ, ಸುಭಾಷ್ ಜೇವರ್ಗಿ,ಧಾನು ನೂಲಾ,ಧಾನು ಪತಾಟೆ, ಪ್ರಶಾಂತ್ ನೇಗಡಿ,ಭೀಮರಾಯಗೌಡ ಪಾಟೀಲ್,ಶರಣು ಮೇತ್ರಿ, ಉಮೇಶ್ ಮೋನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.