Home ಜಿಲ್ಲೆ ಕರೂರು ಗ್ರಾಮದಲ್ಲಿ ವಿದ್ಯುತ್ ತಂತಿಯ ಕಿಡಿ ತಗುಲಿ ಹುಲ್ಲಿನ ಬಣವೆ ಭಸ್ಮ

ಕರೂರು ಗ್ರಾಮದಲ್ಲಿ ವಿದ್ಯುತ್ ತಂತಿಯ ಕಿಡಿ ತಗುಲಿ ಹುಲ್ಲಿನ ಬಣವೆ ಭಸ್ಮ

 ಸಂಜೆವಾಣಿ ವಾರ್ತೆ

 ಸಿರುಗುಪ್ಪ:ಜು,7-  ತಾಲೂಕಿನ ಕರೂರು ಗ್ರಾಮದ ಅಗಸರ ದ್ಯಾವಪ್ಪ ಸರ್ಕಾರಿ ಪ್ರೌಢಶಾಲೆ ಹತ್ತಿರ ಅಗಸರ ಚೆನ್ನಬಸವ ಎನ್ನುವ ರೈತನಿಗೆ ಸೇರಿದ ಹುಲ್ಲಿನ ಬಣವೆಗೆ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಸ್ಪರ್ಶದಿಂದ ಉಂಟಾದ ಕಿಡಿಯಿಂದ ಬೆಂಕಿ ತಗುಲಿ ಸುಮಾರು 20 ಎಕರೆಯ ಹುಲ್ಲಿನ ಬಣವೆ ಸುಟ್ಟು ಹೋದ ಘಟನೆ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದರು, ಆದರೆ ಗಾಳಿಯ ರಭಸ ಹೆಚ್ಚಾಗಿದ್ದರಿಂದ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ದನ ಕರುಗಳ ಮೇವಿಗಾಗಿ 20 ಎಕರೆಯ ಭತ್ತದ ಹುಲ್ಲನ್ನು ಸಂಗ್ರಹಿಸಲಾಗಿತ್ತು ಆದರೆಹುಲ್ಲಿನ ಬಣವೆ ಸಮೀಪ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಆಕಸ್ಮಿಕ ತಂತಿಗಳ ಸ್ಪರ್ಶದಿಂದ ಉಂಟಾದ ಕಿಡಿಯು ಹುಲ್ಲಿನ ಬಣವೆಗೆ ಬಿದ್ದಿದ್ದರಿಂದ ಬಣವೆ ಸುಟ್ಟು ಹೋಗಲು ಕಾರಣವಾಗಿದೆ ಎಂದು ರೈತ ಅಗಸರ ಚನ್ನಬಸವ ತಿಳಿಸಿದ್ದಾರೆ.

ಬಳಕೆ ಆಗಮಿಸಿದ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ, ಈ ಬಗ್ಗೆ ರೈತನ ದಾಖಲೆಗಳನ್ನು ಪರಿಶೀಲಿಸಿ ತಾಲೂಕು ಕಚೇರಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.