Home ಜಿಲ್ಲೆ ಮೊಬೈಲ್ ದೂರವಿಟ್ಟು ಪುಸ್ತಕ ಓದಿ:ಪಂಚಮ ಸಿದ್ಧಲಿಂಗ ಶ್ರೀ

ಮೊಬೈಲ್ ದೂರವಿಟ್ಟು ಪುಸ್ತಕ ಓದಿ:ಪಂಚಮ ಸಿದ್ಧಲಿಂಗ ಶ್ರೀ

ಸೈದಾಪುರ:ಮಾ.20:ವಿಜ್ಞಾನ ಆವಿμÁ್ಕರದಿಂದ ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧ್ಯವಾಗಿದೆಯಾದರೂ ಅದನ್ನು ಮಿತವಾಗಿ ಬಳಸುವ ಅಗತ್ಯವಿದೆ ಇದಕ್ಕಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಮೊಬೈಲ್ ನೋಡಿ ಸಮಯ ವ್ಯರ್ಥ ಮಾಡದೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸಂಕಲ್ಪದೊಂದಿಗೆ ಪ್ರಾರಂಭಿಸಲಾದ ನೋಬಲ್ ಶಾಲೆಯ ಆಡಳಿತ ಮಂಡಳಿಯವರು ಸಾಕಷ್ಟು ಮುತುವರ್ಜಿ ವಹಿಸಿ, ಅತ್ಯುತ್ತಮ ಸಿಬ್ಬಂದಿಯ ಮೂಲಕ ಉತ್ತಮವಾಗಿ ಬೋಧನೆ ಮಾಡಿಸುತ್ತಿದ್ದಾರೆ. ಇದರ ಸದುಪಯೋಗವನ್ನು ಈ ಭಾಗದ ಪ್ರತಿಯೊಬ್ಬ ಪಾಲಕರುತಮ್ಮ ಮಕ್ಕಳಿಗೆ ಕೊಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಟ್ಟೂರು ಶ್ರೀಗಳು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ಶರಣಿಕಕುಮಾರ ದೋಕಾ, ಸೈದಾಪುರ ಠಾಣಾ ಪೆÇಲೀಸ್‍ಇನ್ ಸ್ಪೆಕ್ಟರ್ ಶಿವಾನಂದ ವೈ ಮರಡಿ, ಗ್ರಾಪಂ ಮಾಜಿಅಧ್ಯಕ್ಷ ಲಚಮಪ್ಪಕೊತ್ತ, ಮಹಿಮೂದ ಬಡಿಗೇರ, ಆಂಜನೇಯ ಕಲಾಲ್, ನೋಬಲ್ ಪಬ್ಲಿಕ್ ಶಾಲೆಯ ನರಸಪ್ಪ ನಾರಾಯಣೋರ, ನವೀನಕುಮಾರ ಯಾದವ, ಶಿಕ್ಷಕರಾದ ಅಭಿನಥಾಮಸ್, ಮಾಳಪ್ಪ, ಸಾವಿತ್ರಿ, ಮಮತಾ, ನೇತ್ರಾ, ಸುಪ್ರಿಯಾ, ಸುರೇಖಾ, ಜಯಶ್ರೀ, ರಂಜಿತಾ, ಸೇರಿದಂತೆ ಮುಂತಾದವರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ತಂತ್ರಜ್ಞಾನ ಹೀಗೆ ಮುಂತಾದ ವಿಷಯಗಳನ್ನು ಒಳಗೊಂಡ ಮಾದರಿಗಳನ್ನು ಬಗ್ಗೆ ಗಣ್ಯರು ಸೇರಿದಂತೆ ಸಹಪಾಠಿಗಳಿಗೆ ವಿವರಿಸಿದರು.