Home ಜಿಲ್ಲೆ ಲಕ್ಷೆö್ಮÃಶ್ವರದಲ್ಲಿ ಮಾಂಸದ ಅಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಲಕ್ಷೆö್ಮÃಶ್ವರದಲ್ಲಿ ಮಾಂಸದ ಅಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಲಕ್ಷೆ÷್ಮÃಶ್ವರ,ಮೇ೩೦: ಪಟ್ಟಣದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಸೋಮೇಶ್ವರ ದೇವಸ್ಥಾನದ ದಕ್ಷಿಣ ದ್ವಾರದ ಸಮೀಪವೇ ಮೀನು ಮತ್ತು ಮಾಂಸದ ಅಂಗಡಿಗಳಿದ್ದು ಅವುಗಳನ್ನು ಸ್ಥಳಾಂತರಿಸುವAತೆ ಒತ್ತಾಯಿಸಿ ಶ್ರೀರಾಮ ಸೇನೆ ಹಿಂದೂ ಪರ ಸಂಘಟನೆಗಳು ಮತ್ತು ಪಟ್ಟಣದ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡರುಗಳು ಪವಿತ್ರವಾದ ದೇವಸ್ಥಾನದ ಹಿಂಬದಿಯಲ್ಲಿಯೇ ಅನೇಕ ವರ್ಷಗಳಿಂದ ಮಾಂಸದ ಅಂಗಡಿಗಳಿದ್ದು ಅವುಗಳನ್ನು ಸ್ಥಳಾಂತರಿಸುವAತೆ ಅನೇಕ ಬಾರಿ ಮನವಿ ಕೊಟ್ಟಿದ್ದರು ಯಾರದೋ ಹಿತಾಸಕ್ತಿಗಾಗಿ ಮತ್ತು ಒತ್ತಡಕ್ಕೆ ಪುರಸಭೆಯವರು ಅವುಗಳನ್ನು ತೆರವುಗೊಳಿಸುತ್ತಿಲ್ಲ ಶ್ರದ್ಧಾ ಮತ್ತು ಭಕ್ತಿ ಕೇಂದ್ರವಾದ ಶ್ರೀ ಸೋಮೇಶ್ವರ ದೇವಸ್ಥಾನದ ಸಮೀಪದ ಅಂಗಡಿಗಳನ್ನು ಒಂದು ತಿಂಗಳೊಳಗೆ ತೆರವು ಗೊಳಿಸದಿದ್ದರೆ ಮುಂದಾಗುವ ಯಾವುದೇ ಅನಾಹುತಕ್ಕೂ ಪುರಸಭೆ ಮತ್ತು ಜಿಲ್ಲಾ ಆಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.


ಮನವಿ ಪತ್ರ ಸ್ವೀಕರಿಸಿದ ಮುಖ್ಯ ಅಧಿಕಾರಿ ಅವರು ಆಡಳಿತಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಈರಣ್ಣ ಪೂಜಾರ, ಕುಬೇರಪ್ಪ ಮಹಾಂತ, ಶೆಟ್ಟರ್ ಚಂಬಣ್ಣ, ಬಾಳಿಕಾಯಿ ಬಸವೇಶ್, ಮಹಂತ್ ಶೆಟ್ಟರ್, ಗಂಗಾಧರ ಮೆಣಸಿನಕಾಯಿ, ವಿಜಯ ಹತ್ತಿಕಾಳ ಸೇರಿದಂತೆ ಮೊದಲಾದವರು ಇದ್ದರು.