Home ಜಿಲ್ಲೆ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ


ಲಕ್ಷೆ÷್ಮÃಶ್ವರ,ಮಾ.೮: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾ ಸಂಘಟನೆಗಳ ಒಕ್ಕೂಟ ಹಾಗೂ ಒಳ ಮೀಸಲಾತಿ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಒಳ ಮೀಸಲಾತಿಗೆ ಆಗ್ರಹಿಸಿ ಭಾರಿ ಪ್ರತಿಭಟನೆ ಜರುಗಿತು.


ಪ್ರತಿಭಟನೆಯು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊAಡು ಪ್ರಮುಖ ಬೀದಿಗಳಲ್ಲಿ ಹಲಿಗೆ ಕ್ರಾಂತಿ ಗೀತೆ ಹಾಡುತ್ತಾ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಲ್ಲದೆ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ಹೊಸ ಬಸ್ ನಿಲ್ದಾಣದ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.


ಸಭೆಯಲ್ಲಿ ಮಾತನಾಡಿದ ಡಿಎಸ್‌ಎಸ್ ನ ಹಿರಿಯ ಮುಖಂಡ ಸುರೇಶ ನಂದಣ್ಣನವರ ಫಕೀರೇಶ ಮ್ಯಾಟಣ್ಣನವರ ಬಸವರಾಜ್ ನಂದಣ್ಣವರ ಅನಿಲ್ ಮುಳಗುಂದ ಬಸವರಾಜ್ ಹಿರೇಮನಿ ಕೋಟೆಪ್ಪ ವರ್ದಿ ಮನೋಹರ್ ಕರ್ಜಗಿ ವರು ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಒಳ ಮೀಸಲಾತಿ ನಿಗದಿಯಾಗುವವರೆಗೂ ೫೬೩ ೪೨ ಹುದ್ದೆಗಳನ್ನು ಒಳ ಮೀಸಲಾತಿಯನ್ನು ಗ್ರೂಪ್ ಎ ಬಿ ಸಿ ವರ್ಗೀಕರಣ ಮಾಡಿದ ನಂತರವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರಲ್ಲದೆ ಒಳ ಮೀಸಲಾತಿ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವದಾಗಿ ಎಚ್ಚರಿಸಿದರು ಮಾರ್ಚ್ ೧೨ರಂದು ಬೆಂಗಳೂರು ಚಲೋ ಕಾರ್ಯಕ್ರಮವಿದ್ದು ಎಲ್ಲರೂ ಒಗ್ಗಟ್ಟಿನಿಂದ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.


ಮುಖ್ಯಮಂತ್ರಿಗಳ ಹೆಸರಿನಲ್ಲಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಧನಂಜಯ ಎಂ ಅವರಿಗೆ ಸಲ್ಲಿಸಲಾಯಿತು ಕಂದಾಯ ನಿರೀಕ್ಷಕ ಎಂ ಎ ನದಾ ಫ ಇದ್ದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ದೇವಪ್ಪ ನಂದಣ್ಣನವರ ರಾಮು ಅಡಗಿಮನಿ ರಾಮು ಗಡದವರ ನಾಗರಾಜ್ ದೊಡ್ಮನಿ ಮಾರ್ಥಂಡಪ್ಪ ಗಾಳಪ್ಪನವರ ಫಕೀರೇಶ ನಂದಣ್ಣನವರ ಮಹಾಂತೇಶ್ ಮುಶಪ್ಪನವರ ಹನುಮಂತಪ್ಪ ಹರಿಜನ ಗುಡ್ಡಪ್ಪ ಮತ್ತೂರ ಹನುಮಂತಪ್ಪ ಛಬ್ಬಿ ಚಂದ್ರು ದೊಡ್ಡಮನಿ ಮಲ್ಲಿಕಾರ್ಜುನ್ ಪೂಜಾರ ಬಸವರಾಜ್ ಗೋದಿ ಎಲ್ಲಪ್ಪ ಹಂಜಗಿ ಸೋಮಣ್ಣ ಎತ್ತಿನಹಳ್ಳಿ ಸದಾನಂದ ನಂದಣ್ಣವರ ಫಕೀರೇಶ್ ಬಜಕ್ಕನವರ ಶೇಖರ ಹಂಜಗಿ ಮಾಂತೇಶ ಗುಡಿಸಲಮನಿ ಕಾರ್ತಿಕ್ ದೊಡ್ಡಮನಿ ಮಹೇಶ್ ಬಸವನಾಯಕರ ಶಿವಾನಂದ ಹರಿಜನ ಉಮೇಶ್ ಮ್ಯಾಗೇರಿ ಸಂತೋಷ ಹಾದಿಮನಿ ದೇವರಾಜ್ ನಡವಳಿಕೆರಿ ಬಿ ಎಫ್ ಹರಿಜನ ಎಚ್ ಡಿ ಸಂಜೀವಣ್ಣವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಿಪಿಐ ಬಿವಿ ನ್ಯಾಮಗೌಡ ಪಿಎಸ್‌ಐ ನಾಗರಾಜ್ ಗಡದ ಅವರ ನೇತೃತ್ವದಲ್ಲಿ ಪೊಲೀಸ ಬಂದೋಬಸ್ತ್ ಏರ್ಪಡಿಸಲಾಗಿತ್ತು