Home ಜಿಲ್ಲೆ ಭಾರಿ ಗಾತ್ರದ ವಾಹನ ತಡೆದು ಪ್ರತಿಭಟನೆ

ಭಾರಿ ಗಾತ್ರದ ವಾಹನ ತಡೆದು ಪ್ರತಿಭಟನೆ


ಲಕ್ಷೆ÷್ಮÃಶ್ವರ,ಏ.೨: ತಾಲೂಕಿನ ಮಾಗಡಿ_ ಯಳವತ್ತಿ ಮಧ್ಯ ಜಮೀನಿನಲ್ಲಿ ಕೇರಳ ಮೂಲದ ಗಾಳಿ ಯಂತ್ರದ ಕಂಪನಿಯೊAದು ಫ್ಯಾನ್ ಅಳವಡಿಸಲು ಗೊಜನೂರ ಮಾರ್ಗವಾಗಿ ಲಕ್ಷೆ÷್ಮÃಶ್ವರ ಯಳವತ್ತಿ ಸಿಸಿ ರಸ್ತೆಯನ್ನು ಬಳಸಿಕೊಂಡು ಹೋದಾಗ ಬಾರಿ ಗಾತ್ರದ ವಾಹನಗಳ ಚಾಲನೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಿನ್ನೆ ನೂರಾರು ರೈತರು ಭಾರಿ ಗಾತ್ರದ ಸಿಮೆಂಟ್ ಮಿಕ್ಸರ್ ವಾಹನವನ್ನು ತಡೆಗಟ್ಟಿ ಪ್ರತಿಭಟನೆ ವ್ಯಕ್ತಪಡಿಸಿ ವಾಪಸ್ ಕಳುಹಿಸಿದರು. ಕೇರಳದ ಕಂಪನಿಯೊAದು ಗಾಳಿ ಯಂತ್ರ ಅಳವಡಿಸಲು ಮುಂದಾಗಿದ್ದು ಅದಕ್ಕಾಗಿ ಕೇವಲ ೪-೫ ವರ್ಷಗಳ ಹಿಂದೆ ಮಾಡಿರುವ ಸುಮಾರು ೬ ಕೋಟಿ ರೂ ವೆಚ್ಚದ ಸಿಸಿ ರಸ್ತೆಯನ್ನು ಉಪಯೋಗಿಸಿಕೊಂಡು ಭಾರಿ ಗಾತ್ರದ ವಾಹನಗಳನ್ನು ಅಡ್ಡಾಡಿಸುವುದರಿಂದ ರಸ್ತೆ ಹಾಳಾಗುತ್ತದೆ ಇದರಿಂದ ರೈತರಿಗೆ ಜಮೀನುಗಳಿಗೆ ತಲುಪಲು ಕಷ್ಟವಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ಸಿಸಿ ರಸ್ತೆಯ ಮೇಲೆ ಭಾರಿ ಗಾತ್ರದ ವಾಹನಗಳನ್ನು ಅಡ್ಡಾಡಲು ಬಿಡುವುದಿಲ್ಲ ಎಂದು ವಾಹನದ ಮುಂದೆ ನಿಂತು ಪ್ರತಿಭಟಿಸಿದರು.


ಈ ಸುದ್ದಿ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ರೈತರೊಂದಿಗೆ ಮಾಹಿತಿ ಪಡೆದರು ರೈತರು ಯಾವುದೇ ಕಾರಣಕ್ಕೂ ಈ ರಸ್ತೆಯ ಮೇಲೆ ಭಾರಿ ಗಾತ್ರದ ವಾಹನಗಳನ್ನು ಅಡ್ಡಾಡಲು ಬಿಡುವುದಿಲ್ಲ ಎಂದು ಒಕ್ಕೂರ್ಲಿನಿಂದ ರೈತರು ಪ್ರತಿಪಾದಿಸಿದರು.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ಪೊಲೀಸರು ಸಿಸಿ ಮಿಕ್ಸರ್ ವಾಹನಗಳನ್ನು ವಾಪಸ್ ಕಳುಹಿಸಿದರು.


ಪ್ರತಿಭಟನೆಯಲ್ಲಿ ಮುಖಂಡರಾದ ಆರ್ ಬಿ ಅಜ್ಜನಗೌಡರ ಸುರೇಶ್ ಬೀರಣ್ಣವರ ಬಾಪುಗೌಡ ಪಾಟೀಲ ಉಮೇಶ್ ಜೋಷಿ ಫಕೀರೇಶ ಜವಳಿ ವಸಂತಗೌಡ ಬಾಗೇವಾಡಿ ಹುಸೇನ್ ಸಾಬ್ ಮಸೂತಿ ಶಿವಣ್ಣ ಗಡಿಯನ್ನವರ್ ನಾಗಪ್ಪ ಹೂಗಾರ್ ಬಸವರಾಜ್ ನೀಲಗುಂದ ಖಾದರ್ ಸಾಬ್ ಚಪ್ಪಗೌಡ ನಿಂಗನಗೌಡರ ರಾಜಪ್ಪ ಬ್ಯಾಟಿ ಉದಯ್ ಹೂಗಾರ ಬಸು ಗಡೆಣ್ಣವರ ರುದ್ರಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ರೈತರು ಪಾಲ್ಗೊಂಡಿದ್ದರು.