
ಧಾರವಾಡ, ಮೇ. ೨೭: ಪಾಲಕರಿಗೆ ಸಮೀಪದ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳ ದಾಖಲಾತಿ ಮಾಡಲು ಮನವಲಿಸಲು ಶಿಕ್ಷಕರು ಪ್ರಯತ್ನಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿಸಿ, ೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ವಿಶ್ಲೇ?Àಣೆ ಮಾಡಿ, ೨೦೨೬-೨೭ ನೇ ಸಾಲಿಗೆ ಜಿಲ್ಲೆಯ ಫಲಿತಾಂಶ ಆಧರಿಸಿ ಶಾಲಾ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವ ಕುರಿತು ಪ್ರಗತಿ ಪರಿಶೀಲನಾ ಮಾಡಿ, ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಸದೃಢಗೊಳಿಸುವ ಮತ್ತು ಸಾಮುದಾಯಿಕ ಪಾಲ್ಗೋಳುವಿಕೆಯಲ್ಲಿ ಕ್ರಿಯಾಶೀಲತೆಯನ್ನು ಅಳವಡಿಸಿಕೊಳ್ಳುವ ಕ್ರಮವಾಗಬೇಕು. ನಿರಂತರವಾಗಿ ಪಾಲಕರ ಸಭೆ ಜರುಗಿಸಬೇಕು. ಕಡಿಮೆ ಫಲಿತಾಂಶ ಮಾಡುವ ಖಾಸಗಿ ಹಾಗೂ ಇತರ ಶಾಲೆಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಯಾವುದೇ ಸರ್ಕಾರಿ ಶಾಲೆಗಳ ವಿಲೀನದ ಪ್ರಕ್ರೀಯೆ ಇರುವುದಿಲ್ಲ ಎಂದು ಅವರು ಹೇಳಿದರು.
೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ವಿಶ್ಲೇ?Àಣೆ ಮಾಡಿ, ೨೦೨೬-೨೭ ನೇ ಸಾಲಿಗೆ ಜಿಲ್ಲೆಯ ಫಲಿತಾಂಶ ಆಧರಿಸಿ ಶಾಲಾ ಚಟುವಟಿಕೆಗಳನ್ನು ಇನ್ನ?ÀÄ್ಟ ಉತ್ತಮವಾಗಿ ನಿರ್ವಹಿಸಲು ಅವರು ಸೂಚಿಸಿದರು.
ಸತತ ಮೂರು ವ?Àðಗಳಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ೦ ದಿಂದ ಶೇ. ೪೦ ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಹಾಗೂ ಶೇ. ೨೫ ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಹೊಂದಿದ ಖಾಸಗಿ ಶಾಲೆಗಳ ಫಲಿತಾಂಶ ಸಹ ಸಭೆಯಲ್ಲಿ ಅವರು ವಿಶ್ಲೇಷಿಸಿದರು.
೨೦೨೫-೨೬ ನೇ ಸಾಲಿನಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯಾಗಿದ್ದು ೧೮ ನೇ ಸ್ಥಾನದಿಂದ ೧೨ನೇ ಸ್ಥಾನ ಪಡೆದಿದ್ದು, ಸರ್ಕಾರಿ ಶಾಲೆಗಳ ಫಲಿತಾಂಶವು ಉತ್ತಮವಾಗಿದೆ. ಆದ್ದರಿಂದ ಮಕ್ಕಳ ದಾಖಲಾತಿ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಪಾಲಕರಿಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಪ್ರಯತ್ನಿಸಬೇಕೆಂದು ಅವರು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮವಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಆಶಾದಾಯಕವಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನೀಡಿದ ಸುತ್ತೋಲೆಯಂತೆ ಕ್ರಮವಹಿಸಬೇಕು. ಈ ಕಾರ್ಯಕ್ಕೆ ಜಿಲ್ಲಾ ಪಂಚಾಯತ ಸಹಕಾರ ಪಡೆದುಕೊಳ್ಳಲು ಅವರು ಸೂಚಿಸಿದರು.
ತರಗತಿಗಳಲ್ಲಿ ಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಚಟುವಟಿಕೆಗಳನ್ನು ರೂಢಿಸುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇ?À ಕ್ರಿಯಾಯೋಜನೆ ಮೂಲಕ ಕಲಿಕಾ ಪ್ರಗತಿ ಸಾಧಿಸುವಂತೆ ಮಾಡುವುದು ಪ್ರಸಕ್ತ ವ?Àðದ ಮುಖ್ಯ ಅಂಶವಾಗಿರಲಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಎಲ್ಲ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಗುರಿ ಸಾಧಿಸುವಂತೆ ಪ್ರತಿ ಶಿಕ್ಷಕರಿಗೂ ಶಾಲಾ ಹಂತದಲ್ಲಿ, ತಾಲೂಕ ಹಂತದಲ್ಲಿ, ಜಿಲ್ಲಾ ಹಂತದಲ್ಲಿ, ಡಯಟ್ ಮಾರ್ಗದರ್ಶನದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಜೂನ್ ಆರಂಭದಿAದಲೇ ಅನು?Á್ಠನಗೊಳಿಸಲು ಅವರು ಹೇಳಿದರು.
ಮಕ್ಕಳ ಕಲಿಕೆಯಲ್ಲಿ ಜ್ಞಾನದ ಜೊತೆ ಜೊತೆಗೆ ಮೌಲ್ಯ, ನೀತಿ ಶಿಕ್ಷಣವು ಅ?ೆ್ಟÃ ಮಹತ್ವದ್ದಾಗಿದೆ. ಶಾಲಾ ಚಟುವಟಿಕೆಗಳಲ್ಲಿ ಸನ್ನಡತೆಯನ್ನು ಬೆಳೆಸುವ ಮೌಲ್ಯವನ್ನು ರೂಡಿಸುವ ಚಟುವಟಿಕೆಗಳನ್ನು ಒಳಗೊಂಡ ಕ್ರಿಯಾಯೋಜನೆ ಸಿದ್ಧಪಡಿಸಲು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಪ್ರಸ್ತುತ ೨೦೨೬-೨೭ ನೇ ಸಾಲಿನಲ್ಲಿ ಎಸ್.ಸಿ, ಎಸ್.ಟಿ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಪ್ರಯತ್ನವನ್ನು ಜೂನ್ ಮೊದಲ ವಾರದಿಂದ ನಿರ್ವಹಿಸಲು ವಿಶೇ?À ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಹುಬ್ಬಳ್ಳಿ ಶಹರ, ಧಾರವಾಡ ಶಹರ, ಕುಂದಗೋಳ ಹಾಗೂ ನವಲಗುಂದ ತಾಲೂಕಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಕಡಿಮೆಯಾಗಿದ್ದು, ಸದರಿ ತಾಲೂಕಗಳ ಫಲಿತಾಂಶವನ್ನು ಹಾಗೂ ಶೇ. ೬೦ ಕ್ಕಿಂತ ಕಡಿಮೆ ಫಲಿತಾಂಶ ಹೊಂದಿದ ಎಲ್ಲ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ ಸ್ಥಿತಿಯ ವರದಿಯನ್ನು ಸಲ್ಲಿಸಲು ಅವರು ನಿರ್ದೇಶಿಸಿದರು.
೨೦೨೫-೨೬ ನೇ ಸಾಲಿನಲ್ಲಿ ಕಡಿಮೆ ಫಲಿತಾಂಶವನ್ನು ಪಡೆದ ಹುಬ್ಬಳ್ಳಿ ಶಹರ, ಧಾರವಾಡ ಶಹರ, ಕುಂದಗೋಳ ಹಾಗೂ ನವಲಗುಂದ ತಾಲೂಕುಗಳ ಫಲಿತಾಂಶ ಸುಧಾರಣೆಗಾಗಿ ವಿಶೇ?À ಪ್ರಯತ್ನ ಮತ್ತು ಚಟುವಟಿಕೆಗಳನ್ನು ನಿರ್ವಹಿಸಲು ಅವರು ಸೂಚಿಸಿದರು.
ಮಕ್ಕಳನ್ನು ಮೊಬೈಲ್ ಗಿಳಿನಿಂದ ಹೊರ ತರಲು ಹಾಗೂ ಪೋ?Àಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಪೋ?Àಕರಿಗೆ ತಿಳಿಸಿ, ನಿಯಮಿತವಾಗಿ ಪಾಲಕರ ಸಭೆ ಜರುಗಿಸಬೇಕು. ಪ್ರತಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಬಾಲಕರ ಫಲಿತಾಂಶ ಬಾಲಕಿಯರ ಫಲಿತಾಂಶಕ್ಕಿAತ ಕಡಿಮೆ ಇರುವುದು ಕಂಡುಬAದಿದೆ. ಇದರಿಂದಾಗಿ ಬಾಲಕರು ಶಾಲೆಗೆ ನಿಯಮಿತವಾಗಿ ಹಾಜರಾಗುವಂತೆ ಹಾಗೂ ಅಧ್ಯಯನದಲ್ಲಿ ತೊಡಗುವಂತೆ ಮಾಡಲು ಬಾಲಕರಿಗಾಗಿಯೇ ವಿಶೇ?À ಚಟುವಟಿಕೆಗಳನ್ನು ನಿರ್ವಹಿಸಬೇಕೆಂದು ಅವರು ಹೇಳಿದರು.
ಶಾಲೆಗಳು ಜೂನ್ ೧ ರಿಂದ ಆರಂಭವಾಗುತ್ತಿದ್ದು, ಶಾಲೆ ಕಟ್ಟಡ ಸುಸ್ಥಿತಿಯಲ್ಲಿರುವಂತೆ ಮುರ್ತುವಜಿ ವಹಿಸುವುದು ಹಾಗೂ ಕಟ್ಟಡವು ಮಳೆ ಹಾನಿಗೆ ಒಳಪಡದಂತೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ಒದಗಿಸಲು ಸಿವಿಲ್ ಕಾಮಗಾರಿಗಳ ಅಗತ್ಯವಿದ್ದಲ್ಲಿ ಮಾಹಿತಿಯನ್ನು ನೀಡಬೇಕು. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಕುರಿತು ಜಿಲ್ಲಾ ಹಾಗೂ ತಾಲೂಕ ಮುಖ್ಯಸ್ಥರಿಗೆ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಯಟ್ ಪ್ರಾಂಶುಪಾಲ ಬಸವರಾಜ ನಾಲ್ವತವಾಡ್ ಇದ್ದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ನಿರೀಕ್ಷಕರು, ಉಪನಿರ್ದೇಶಕರ ಕಚೇರಿಯ ಸಂಯೋಜಕರು ಹಾಗೂ ಸಮನ್ವಯಾಧಿಕಾರಿಗಳು, ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

























