Home ಜಿಲ್ಲೆ ಪೂರ್ವಭಾವಿ ಸಿದ್ಧತಾ ಸಭೆ

ಪೂರ್ವಭಾವಿ ಸಿದ್ಧತಾ ಸಭೆ

ಲಕ್ಷ್ಮೇಶ್ವರ,ಮಾ14: ತಹಶೀಲ್ದಾರರ ಕಾರ್ಯಾಲಯದಲ್ಲಿ ನಿನ್ನೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಸಭೆ ತಹಶೀಲ್ದಾರ್ ಧನಂಜಯ್ ಎಂ ಅವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಭೆಯಲ್ಲಿ ತಹಶೀಲ್ದಾರ್ ಧನಂಜಯ್ ಎಂ. ಅವರು ತಾಲೂಕಿನ ಆರೋ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನಕಲು ಮುಕ್ತ ಮತ್ತು ಸ್ನೇಹಮಯ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಿದರು.


ಅವರು ವಿದ್ಯಾರ್ಥಿಗಳಿಗೆ ವೇಳೆಗೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಕೆಎಸ್‍ಆರ್ಟಿಸಿ ಅವರು ಬಸ್ಸಿನ ವ್ಯವಸ್ಥೆ ಕಲ್ಪಿಸ ಬೇಕಲ್ಲದೆ ಪರೀಕ್ಷಾ ಕೇಂದ್ರದ ಹತ್ತಿರವೇ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಹಾಗೂ ಆರೋಗ್ಯ ಇಲಾಖೆಯವರು ಪೆÇೀಲಿಸ್ ಇಲಾಖೆಯವರು ಶಿಕ್ಷಣ ಇಲಾಖೆಯವರು ಜಂಟಿಯಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಬೆಳಕು ಗಾಳಿ ಮತ್ತು ಸಿ ಸಿ ಕ್ಯಾಮೆರಾ ಅಳವಡಿಸುವ ಮೂಲಕ ಕಟ್ಟುನಿಟ್ಟಿನ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು.


ಪ್ರೌಡ ಶಿಕ್ಷಣ ವಿಭಾಗದ ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಅವರು ಸಭೆಗೆ ಪರೀಕ್ಷಾ ಪೂರ್ವ ಸಿದ್ಧತೆಯ ಎಲ್ಲಾ ವಿವರಗಳನ್ನು ನೀಡಿ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡಿರುವದಾಗಿ ತಿಳಿಸಿದರು.


ಸಭೆಯಲ್ಲಿ ಏನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕಿ ಸವಿತಾ ಆದಿ ಎಎಸ್‍ಐ ವಿ ಸಿ ದೊಡ್ಮನಿ ಕೃಷ್ಣಕುಮಾರ್ ಕುಲಕರ್ಣಿ ಮಂಜುಳಾ ಹೂಗಾರ್ ಸೇರಿದಂತೆ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಪರೀಕ್ಷಾ ಸಂಬಂಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.