Home ಕ್ರೈಂ ಸುದ್ದಿಗಳು ಕಾರು ಅಪಘಾತ ಪೊಲೀಸ್ ಇಲಾಖೆಯ ಜಿಎಚ್‍ಓ ಸಾವು

ಕಾರು ಅಪಘಾತ ಪೊಲೀಸ್ ಇಲಾಖೆಯ ಜಿಎಚ್‍ಓ ಸಾವು

ತಾಳಿಕೋಟೆ :ಮೇ.26: ಹೈದ್ರಾಬಾದ್‍ದಿಂದ ಮಗಳನ್ನು ಕರೆದುಕೊಂಡು ತಾಳಿಕೋಟೆ ಮಾರ್ಗವಾಗಿ ಬಾಗಲಕೋಟೆಗೆ ತರಳುತ್ತಿದ್ದ ಸಮಯದಲ್ಲಿ ತಾಳಿಕೋಟೆ ಸಮಿಪದಲ್ಲಿ ಆಲದಮರಕ್ಕೆ ಕಾರು ಡಕ್ಕಿಯಾಗಿ ತಂದೆ ಬಾಗಲಕೋಟೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಎಚ್‍ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ನಿಸಾರಹಮ್ಮದ ಅಬ್ದುಲ್‍ರಜಾಕ ಹಿಪ್ಪರಗಿ(50) ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಸೋಮವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ನಡೆದಿದೆ.
ನಿಸಾರಹಮ್ಮದ ಹಿಪ್ಪರಗಿ ಇತನು ಮಗಳಾದ ನೇಹಾ ಎಂಬವಳನ್ನು ಹೈದ್ರಾಬಾದ್‍ಗೆ ಐಪಿಎಸ್ ಕೋಚಿಂಗ್ ಬಿಟ್ಟಿದ್ದು ನಂತರ ಕೋಚಿಂಗ್ ನಂತರ ಹೈದ್ರಾಬಾದನಲ್ಲಿಯೇ ಐಪಿಎಸ್ ಪರಿಕ್ಷೆ ಮುಗಿದಿದ್ದರಿಂದ ಸ್ನೇಹಿತ ಬಸವರಾಜ ಸೊನಾ ಎಂಬವರ ಜೊತೆಗೂಡಿ ಮಗಳಾದ ನೇಹಾಳನ್ನು ಕರೆದುಕೊಂಡು ಬರುತ್ತಿದ್ದರೆನ್ನಲಾಗಿದ್ದು ತಾಳಿಕೋಟೆ ಸಮಿಪ ಬರುತ್ತಿದ್ದಾಗ ಕರವಿಂಗ್‍ನಲ್ಲಿ ನಿಸಾರಹಮ್ಮದನ ಅಜಾಗರುಕತೆ ಕಾರು ಚಲಾವಣೆಯಿಂದ ಬಲಗಡೆ ಇರುವ ಆಲದಮರಕ್ಕೆ ಕಾರು ಡಿಕ್ಕಿಹೊಡೆದಿದ್ದರಿಂದ ಸ್ಥಳದಲ್ಲಿಯೇ ನಿಸಾರಹಮ್ಮದ ಹಿಪ್ಪರಗಿ ಸಾವನಪ್ಪಿದ್ದಾನೆಂದು ಮೃತನ ಅಳಿಯನಾದ ಅಜೀಜಹಮ್ಮದ ಕುಡಚಿ ಅವರು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಮಗಳಾದ ನೇಹಾ(22) ಮತ್ತು ಅಪಘಾತದಲ್ಲಿ ಮೃತಪಟ್ಟ ನಿಸಾರಹಮ್ಮದನ ಸ್ನೇಹಿತ ಎಎಸ್‍ಐ ಬಸವರಾಜ ಸೋನಾ(ಪೊಲೀಸ್ ಇಲಾಖೆ)(51) ಇವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಡಿವಾಯ್‍ಎಸ್‍ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಮಹ್ಮದ ಪಸೀಉದ್ದೀನ, ಪಿಎಸ್‍ಐ ಶ್ರೀಮತಿ ಜ್ಯೋತಿ ಖೋತ್, ಅಪರಾಧ ವಿಭಾಗದ ಪಿಎಸ್‍ಐ ಎಸ್.ಎಂ.ಪಡಶೆಟ್ಟಿ ಬೆಟ್ಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.