
ಕಲಬುರಗಿ :ಜೂ.21:ನಗರವನ್ನು ಹಸಿರುಮಯ ಹಾಗೂ ಆರೋಗ್ಯಕರವಾಗಿಸುವ ಉದ್ದೇಶದಿಂದ ಎಸ್‍ಆರ್‍ಎನ್ ಮೆಹತಾ ಸ್ಟೇಟ್ ಸ್ಕೂಲ್‍ನ ವಿದ್ಯಾರ್ಥಿಗಳು ಕಲಬುರಗಿ ನಗರದ ವಿವಿಧ ಪ್ರದೇಶಗಳಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮ ಹಮ್ಮಿಕೊಂಡರು. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಹಸಿರೀಕರಣದ ಅಗತ್ಯವಿರುವ ಪ್ರದೇಶಗಳನ್ನು ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿ ಗುರುತಿಸಿದರು. ನಂತರ ಮನೆ ಮಾಲೀಕರು ಹಾಗೂ ಮಹಾನಗರ ಪಾಲಿಕೆಯ ಅನುಮತಿ ಪಡೆದು ನಗರದ ವಿವಿಧ ಭಾಗಗಳಲ್ಲಿ 45 ಸಸಿಗಳನ್ನು ನೆಟ್ಟರು.
ಈ ಮಹತ್ವದ ಕಾರ್ಯವು ವಿಜ್ಞಾನ ವಿಭಾಗದ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಿತು. ಶಿಕ್ಷಕರು ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿ, ಈ ಸಮಾಜಮುಖಿ ಕಾರ್ಯದಲ್ಲಿ ಅವರೊಂದಿಗೆ ಭಾಗವಹಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರೀತಿ ಮೆಹತಾ ಅವರು ವಿದ್ಯಾರ್ಥಿಗಳ ಈ ಪರಿಸರ ಸ್ನೇಹಿ ಕಾರ್ಯವನ್ನು ಶ್ಲಾಘಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳ ಈ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಲಬುರಗಿಯನ್ನು ಇನ್ನಷ್ಟು ಹಸಿರುಮಯವಾಗಿಸುವ ನಿಟ್ಟಿನಲ್ಲಿ ಇದು ಅರ್ಥಪೂರ್ಣ ಹೆಜ್ಜೆಯಾಗಿದೆ.


























